×
Ad

ಹಾಸನ | ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಾಂಶುಪಾಲೆ ಸೇರಿ ಐವರ ಬಂಧನ

Update: 2023-03-09 21:47 IST

ಹಾಸನ : ಮಾ, 9:  ಬೇಲೂರು ತಾಲೂಕಿನ ಹಳೇಬೀಡು ಸಮೀಪ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳಿಗೆ ಸಿಗಬೇಕಾದ ಆಹಾರ ಪದಾರ್ಥಗಳ ಮತ್ತು ಸವಲತ್ತುಗಳನ್ನು ನೀಡದೇ ವಂಚಿತರಾಗಿ ಮಾಡಿದ್ದಲ್ಲದೇ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ  ಐವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. 

ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರಕಾರಕ್ಕೆ ಒಳಪಡುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ನಡೆದ ಕರ್ಮಕಾಂಡದ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಗಮನಸೆಳೆದ ಹಿನ್ನಲೆಯಲ್ಲಿ ಸ್ಥಳೀಯ ಶಾಸಕರು, ಪೊಲೀಸರು, ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಹಲವು ವಿದ್ಯಾರ್ಥಿಗಳು ತಮಗಾದ ದೌರ್ಜನ್ಯ ಕುರಿತು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಹೇಳಿಕೆ ದಾಖಲು ಮಾಡಿದ ಬೆನ್ನಲ್ಲೇ ಪೊಲೀಸರು ಐವರನ್ನು ಬಂದಿಸಿದ್ದಾರೆ ಎಂದರು. 

ವಸತಿ ನಿಲಯದ ಎಂಟು ವಿದ್ಯಾರ್ಥಿನಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಯತ್ನವಾಗಿದೆ ಎಂದು ದೂರು ನೀಡಿದ್ದಾರೆ 10ನೇ ತರಗತಿಯ 3 ಹಾಗೂ 7ನೇ ತರಗತಿಯ 5 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಕುರಿತು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇದೆ ವೇಳೆ ಐವರ ಮೇಲಿನ ದೂರಿನ ಹಿನ್ನಲೆಯಲ್ಲಿ ಎಸ್ ಸಿ ಎಸ್ ಟಿ ಕಾಯ್ದೆ ಹಾಗೂ ಚೈಲ್ಡ್ ಪ್ರೊಟೆಕ್ಷನ್ ಆಕ್ಟ್ ಅಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟು 300 ವಿದ್ಯಾರ್ಥಿಗಳಿಗೆ ದಿನಕ್ಕೆ ಒಂದು ಒಂದು ಕೆ.ಜಿ. ಬೇಳೆ, ಒಂದು ಲೀಟರ್ ಎಣ್ಣೆ, ಒಂದು ಲೀಟರ್ ಹಾಲು, ಮೂರು ಲೀಟರ್ ಮೊಸರು ಸೇರಿದಂತೆ ಮಕ್ಕಳ ಊಟಕ್ಕೆ ಕತ್ತರಿ ಹಾಕಿದ್ದರು. ಜೊತೆಗೆ ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ಪೊಲೀಸರು ಸಂಕ್ಷಿಪ್ತವಾಗಿ ತನಿಖೆ ಆರಂಭಿಸಿದ್ದು, ಈಗಾಗಲೇ ಪ್ರಾಂಶುಪಾಲರಾದ ಗೀತಾ ಬಾಯಿ, ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಪುನೀತ್, ಶಿಕ್ಷಕ ಶಿವಯ್ಯ, ಅಟೆಂಡರ್ ಶೃತಿ, ಹಾಗು ಗಣಿತ ಶಿಕ್ಷಕ ವಿಜಯ್ ಕುಮಾರ್ ಎಂಬುವವರ ಮೇಲೆ ದೂರು ದಾಖಲಿಸಿ ಅವರನ್ನೆಲ್ಲಾ ಬಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಲಾ-ಕಾಲೇಜು ಸೇರಿದಂತೆ ಎಲ್ಲಿಯೇ ಮಕ್ಕಳ ಮೇಲೆ ಇಂತಹ ದೌರ್ಜನ್ಯಗಳು ಏಲ್ಲಾದರೂ ಕಂಡು ಬಂದರೇ ತಕ್ಷಣದಲ್ಲಿ 1098 ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದಾಗಿದೆ ಎಂದರು.

Similar News