ಹುಬ್ಬಳ್ಳಿ | ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2023-03-09 18:30 GMT

ಹುಬ್ಬಳ್ಳಿ, ಮಾ.9: ಬಾಲಕಿಗೆ ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಹುಬ್ಬಳಿಗೆ ಕರೆತಂದಿದ್ದ ಯುವಕನೋರ್ವ ತನ್ನ ಗೆಳೆಯರ ಜೊತೆ ಸೇರಿಕೊಂಡು ಸಾಮಾಹಿಕ ಅತ್ಯಾಚಾರ ಮಾಡಿದ ಘಟನೆ ಹುಬ್ಬಳಿಯಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳಿಯ ಶೇರುವಾಡ್ ತಾಲೂಕಿನ ನಿವಾಸಿಗಳಾದ ಪರಿಚಯಸ್ಥ ದೇವರಾಜ್, ಫಕ್ಕಿರೇಶ ಸೇರಿ ನಾಲ್ವರು ಅತ್ಯಾಚಾರ ಎಸಗಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ದೂರಿನಲ್ಲೇನಿದೆ?:

ಮಾರ್ಚ್ 8ರಂದು ದೇವರಾಜನು ನನ್ನ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಈ ವೇಳೆ  ಮೊಬೈಲ್ ಕೊಡಿಸುತ್ತೇನೆ ಎಂದು ಆಮೀಷ ತೋರಿಸಿ, ಗ್ರಾಮದಿಂದ ಹುಬ್ಬಳ್ಳಿಗೆ ಕರೆಯಿಸಿದ್ದ. ಬಳಿಕ  ನಗರ ಸುತ್ತಾಡಿಸಿ ಖಾಸಗಿ ಹೋಟೆಲೊಂದಕ್ಕೆ ಕರೆದುಕೊಂಡ ದೇವರಾಜ್ ತನ್ನ ಸ್ನೇಹಿತನ ಜೊತೆ ಸೇರಿಕೊಂಡು ನನಗೆ ಹಲ್ಲೆ ಮಾಡಿದ್ದಾನೆ ಎಂದು ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ. 

ಬಳಿಕ ಬೈಕ್ ಮೇಲೆ ಹುಬ್ಬಳ್ಳಿ ಬೈಪಾಸ್ ರಿಂಗ್ ರೋಡ್‌ನ ಬ್ರಿಡ್ಜ್ ಬಳಿಗೆ ಕರೆದುಕೊಂಡು ಹೋಗಿ ಇಬ್ಬರು ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ. ನಂತರ ತನ್ನ ಮತ್ತಿಬ್ಬರು ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದ ದೇವರಾಜ್, ಅವರಿಂದಲೂ ಅತ್ಯಾಚಾರ ಮಾಡಿಸಿದ್ದಾನೆ ಎಂದು ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ>>> ಬೆಳಗಾವಿ | ಜಮೀನಿನಲ್ಲಿ ವಿಚಿತ್ರ ಬಲೂನ್ ಪತ್ತೆ: ಗ್ರಾಮಸ್ಥರಲ್ಲಿ  ಕುತೂಹಲ

Similar News