ಬಲಿಜ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರಕಾರ ಆದೇಶ

Update: 2023-03-10 17:34 GMT

ಬೆಂಗಳೂರು, ಮಾ.10: ಬಲಿಜ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಈ ಮೂಲಕ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ- 3ಎ ನ ಕ್ರಮ ಸಂಖ್ಯೆ 3 (ಎ) ಯಿಂದ (ಎಂ) ವರೆಗೆ ಒಳಪಡುವ ಬಲಿಜ ಬಲಜಿಗ, ಬಣಜಿಗ ಗೌಡ ಬಣಜಿಗ, ನಾಯ್ಡು, ತಲಗ ಬಲಿಜ-ತಲಗ ಬಣಜಿಗ, ಶೆಟ್ಟಿ ಬಲಿಜ, ಶೆಟ್ಟಿ ಬಣಜಿಗೆ, ಬಣಜಿಗಶೆಟ್ಟಿ, ದಾಸರ ಬಲಿಜ, ದಾಸರ ಬಲಜಿಗೆ ದಾಸರ ಬಣಜಿಗ ದಾಸ ಬಣಜಿಗ, ಕಸ್ಟೈನ್, ಮುನ್ನೂರ, ಮುನ್ನಾರ, ಮುನ್ನೂರ್ ಕಾವು, ಬಳಗಾರ, ಬಳಿ ಬಣಜಿಗ, ಬಳ ಬಲಜಿಗ, ಬಳ ಛಟ್ರಿ, ಬಣಗಾರ, ರಸ್ತೆ, (ಬಲಿಜ), ಜನಪ್ಸನ್, ಉಪ್ಪಾರ(ಬಲಿಜ), ತುಲೇರು ಜಾತಿಗಳಿಗೆ ಔದ್ಯೋಗಿಕ ಮೀಸಲಾತಿಯನ್ನು ನಿಗಮದಲ್ಲಿ ಕಲ್ಪಿಸಿ ಆದೇಶಿಸಲಾಗಿದೆ.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪವರ್ಗ-3ಎ ರಲ್ಲಿ ಔದ್ಯೋಗಿಕ ಮೀಸಲಾತಿ ಹಾಗೂ ಪವರ್ಗ-2ಎ ನಲ್ಲಿ ಶೈಕ್ಷಣಿಕ ಮೀಸಲಾತಿ ಕಲ್ಪಿಸಿ ಆದೇಶದಲ್ಲಿ ತಿಳಿಸಲಾಗಿದೆ.

Similar News