×
Ad

ನಾಗಮಂಗಲ: ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ರಂಗ ಮಂದಿರದಿಂದ ಸುಮಲತಾ ಫೋಟೋ ತೆರವು

Update: 2023-03-11 12:39 IST

ಮಂಡ್ಯ, ಮಾ.11: ಜಿಲ್ಲೆಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್​ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಲ್ಲಿದ್ದ ಅವರ ಫೋಟೋ ತೆರವುಗೊಳಿಸಲಾಗಿದೆ.

ಬಿದರಕೆರೆ ಗ್ರಾಮದಲ್ಲಿ ದಿವಂಗತ ನಟ ಅಂಬರೀಶ್​ ಅವರ ಅನುದಾನದಿಂದ  ಖ್ಯಾತ ಸಾಹಿತಿ ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣವಾಗಿತ್ತು. ಅಲ್ಲಿ ಡಾ. ರಾಜ್ ಕುಮಾರ್, ದಿವಂಗತ ಅಂಬರೀಶ್​​, ಸುಮಲತಾ ಸೇರಿ ಹಲವು ಗಣ್ಯರ ಫೋಟೊ ಅಳವಡಿಸಲಾಗಿತ್ತು. ಇದೀಗ ಗ್ರಾಮದ ಯುವಕರು ಸುಮಲತಾ ಅಂಬರೀಶ್​ ಅವರ ಫೋಟೊ ತೆರವುಗೊಳಿಸಿದ್ದಾರೆ. 

ಈ ಬಗ್ಗೆ ಅಂಕಣಕಾರ ಬಿ. ಚಂದ್ರೇಗೌಡ ಅವರು ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾಗ ನಮ್ಮ ಊರಿನಿಂದ ಅವರಿಗೆ ಅತೀ ಹೆಚ್ಚು ಮತಗಳು ಬಂದಿತ್ತು. ಅವರ ಗೆಲುವಿನ ನಂತರ ಅವರ ಮೇಲಿನ ಅಭಿಮಾನದಿಂದ ಇಲ್ಲಿನ ಲಂಕೇಶ್ ರಂಗ ಮಂದಿರದಲ್ಲಿ ಅವರ ಭಾವ ಚಿತ್ರವನ್ನೂ ಅಳವಡಿಸಲಾಗಿತ್ತು. ಇದೀಗ ಸುಮಲತಾ ಅವರು ಏಕಾ ಏಕಿ ಬಿಜೆಪಿಗೆ ಬೆಂಬಲ ಘೋಷಿಸಿದ್ದು, ಗ್ರಾಮದ ಯುವಜನರಿಗೆ ಆಘಾತ ಉಂಟು ಮಾಡಿದೆ. ಈ ಕಾರಣಕ್ಕಾಗಿಯೇ ರಂಗ ಮಂದಿರದಿಂದ ಸುಮಲತಾ ಅವರ ಫೋಟೋ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು. 

ಇದನ್ನೂ ಓದಿಸಂಸದೆ ಸುಮಲತಾ ಬಿಜೆಪಿ ಬೆಂಬಲಿಸುವ ತೀರ್ಮಾನ ಮಂಡ್ಯ ಜಿಲ್ಲೆಯ ಜನತೆಗೆ ಬಗೆದ ದ್ರೋಹ: ಸಿಪಿಐ(ಎಂ)

Similar News