ಮಂಡ್ಯ: ಕಾಲುಜಾರಿ ಕೆರೆಗೆ ಬಿದ್ದು ಇಬ್ಬರು ಮಹಿಳೆಯರು ಮೃತ್ಯು

Update: 2023-03-11 14:56 GMT

ಮಂಡ್ಯ, ಮಾ.11: ಕೆರೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು ಮಹಿಳೆಯರು ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕು ಆಲಂ ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಶಿವಣ್ಣ ಅವರ ಪತ್ನಿ ಸರೋಜ ಅಲಿಯಾಸ್ ದೊಡ್ಡತಾಯಮ್ಮ(35) ಹಾಗೂ ಸ್ವಾಮಿ ಅವರ ಎಂಬುವರ ಪತ್ನಿ ಶಾರದಾ(32) ಸಾವಿಗೀಡಾದವರು ಎಂದು ಗುರುತಿಸಲಾಗಿದೆ.

ಈ ಇಬ್ಬರು ಮಹಿಳೆಯರು ಬಟ್ಟೆ ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Similar News