×
Ad

ಚಿಕ್ಕಮಗಳೂರಿನ ಪ್ರಥಮ ಪತ್ರಕರ್ತೆ ಕಮಲಾ ಶ್ರೀಕಂಠ ನಿಧನ

Update: 2023-03-12 23:58 IST

ಚಿಕ್ಕಮಗಳೂರು, ಮಾ.12: 1969 -70ರಲ್ಲಿ ಮೂಡಿಗೆರೆ ತಾಲೂಕಿನ ಉದಯವಾಣಿ ಪತ್ರಿಕೆಯ ವರದಿಗಾರರಾಗುವುದರ ಮೂಲಕ ಜಿಲ್ಲೆಯ ಪ್ರಥಮ ಪತ್ರಕರ್ತೆಯಾಗಿ, ಚಿಕ್ಕಮಗಳೂರಿನಲ್ಲಿ ಪಿಟಿಐ ವರದಿಗಾರರಾಗಿ ಜನರಲ್ಲಿ ಕಾರ್ಯನಿರ್ವಹಿಸಿದ್ದ ಕಮಲಾ ಶ್ರೀಕಂಠ (78) ಹೃದಯಾಘಾತದಿಂದ ಬೆಳಗಾವಿಯಲ್ಲಿರುವ ಮಗಳ ಮನೆಯಲ್ಲಿ ಮೃತರಾದರು.

ಪೊಲೀಸರನ್ನು ಬೆದರಿಸಿದ ಕಾಗೆಗಳು, ಕೂರುವ ಕುರ್ಚಿಕಿತ್ತರು ತಲೆಬರಹದ ಅವರ ವರದಿಗಳು ರಾಜ್ಯಾದಾದ್ಯಂತ ಬಹಳ ಚರ್ಚೆಗಳು ನಡೆದಿದ್ದವು. ಕಮಲಾ ಶ್ರೀಕಂಠ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಬೆಳಗಾವಿಯ ಕೊನೆಯ ಮಗಳ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

Similar News