ಬಿಜೆಪಿಗರ ವಿರುದ್ಧ ಕಾನೂನು ಕೈ ಕಟ್ಟಿ ನಿಲ್ಲುವುದೇಕೆ?: ಯಶ್ಪಾಲ್ ಸುವರ್ಣ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ

ಡೆತ್ ನೋಟ್‌ ಬರೆದಿಟ್ಟು ಕೋ-ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣ

Update: 2023-03-13 10:01 GMT

ಬೆಂಗಳೂರು: ಉಡುಪಿ ಮಹಾಲಕ್ಷ್ಮಿಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್ ಸುಬ್ಬಣ್ಣ(50) ಎಂಬವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಬಂಧಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಉಡುಪಿಯ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕಿನ ಮ್ಯಾನೇಜರ್ ಡೆತ್ ನೋಟ್‌ನಲ್ಲಿ ಯಯಶ್ಪಾಲ್ ಸುವರ್ಣಶ್ಪಾಲ್ ಸುವರ್ಣನ ವಿರುದ್ದ ನೇರವಾಗಿ ಕಿರುಕುಳದ ಆರೋಪ ಮಾಡಿದ್ದರೂ ಆತನನ್ನು ಬಂಧಿಸಿಲ್ಲವೇಕೆ? ಕಾನೂನನ್ನು ಕಡಲೇಬೀಜ ಮಾಡಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ಕೊಲೆಗಡುಕರ ರಕ್ಷಣೆಯೇ ಗೃಹಸಚಿವರಾಗಿ ನಿಮ್ಮ ಹೊಣೆಯೇ? ಬಿಜೆಪಿಗರ ವಿರುದ್ಧ ಕಾನೂನು ಕೈ ಕಟ್ಟಿ ನಿಲ್ಲುವುದೇಕೆ?'' ಎಂದು ಕಿಡಿಕಾರಿದೆ. 

''ಗುತ್ತಿಗೆದಾರರ ನಂತರ ಬ್ಯಾಂಕ್ ಮ್ಯಾನೇಜರ್ ಸರದಿ''

''ಶೇ. 40 ಸರಕಾರದ ದ ಕಮಿಷನ್ ಕಿರುಕುಳಕ್ಕೆ ಗುತ್ತಿಗೆದಾರರ ಆತ್ಮಹತ್ಯೆಯ ನಂತರ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಸರದಿ. ಉಡುಪಿಯ ಮಹಾಲಕ್ಷ್ಮಿ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷನಾಗಿರುವ ಯಶ್‌ಪಾಲ್ ಸುವರ್ಣನನ್ನು ಹೆಸರಿಸಿ ಅದೇ ಬ್ಯಾಂಕಿನ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡ ಸಂಗತಿ ಬೆಳಕಿಗೆ ಬಂದಿದೆ, ಸರ್ಕಾರ ಮಾತ್ರ ರಕ್ಷಣೆಗೆ ನಿಂತಿದೆ'' ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ಆರೋಪಿಸಿದೆ. 

Similar News