ಬಾಗಲಕೋಟೆ: ಸಹೋದರಿಯರಿಬ್ಬರ ಬರ್ಬರ ಹತ್ಯೆ

Update: 2023-03-13 17:15 GMT

ಬಾಗಲಕೋಟೆ: ಆಸ್ತಿ ವಿಚಾರಕ್ಕಾಗಿ ಸಂಬಂಧಿಕರಿಂದಲೇ ಇಬ್ಬರು ಸಹೋದರಿಯರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯ ಕುರುಬರ ಓಣಿಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ವರದಿಯಾಗಿದೆ.

ಯಲ್ಲವ್ವ ಭುಜಂಗ(40) ಹಾಗು ಬೌರವ್ವ ಭುಜಂಗ(37) ಕೊಲೆಯಾದ ಸಹೋದರಿಯರು ಎಂದು ತಿಳಿದು ಬಂದಿದೆ.

ಘಟನೆ ಮಾಹಿತಿ ಪಡೆದ ಬನಹಟ್ಟಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

Similar News