×
Ad

ಶ್ಯಾಮನೂರಿನಲ್ಲಿ ಮನೆ ಮನೆಗೆ 'ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌' ಹಂಚಿದ ಸಿದ್ದರಾಮಯ್ಯ

Update: 2023-03-14 23:22 IST

ದಾವಣಗೆ: ಇಲ್ಲಿನ ಶಾಮನೂರುವ ವಿಧಾನಸಭೆ ಕ್ಷೇತ್ರದ ಹಲವು ಮನೆಗಳಿಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಗಳನ್ನು ಮನೆ ಮನೆಗೆ ಹಂಚಿಕೆ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬಂದರೆ, ಪ್ರತಿ ಕುಟುಂಬಕ್ಕೆ 2000 ರೂಪಾಯಿಗಳು, ಹಾಗೂ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಹಾಗೂ 200 ಯೂನಿಟ್ ಕರೆಂಟ್ ಬಿಲ್ಲನ್ನು ಉಚಿತವಾಗಿ ನೀಡುವ ಭರವಸೆಯ ಗ್ಯಾರಂಟಿ ಕಾರ್ಡ್ ಗಳಾಗಿದ್ದು ಈ ಕಾರ್ಡುಗಳನ್ನು ಹಂಚುವ ಕಾರ್ಯಕ್ರಮವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.  

ಸಿದ್ದರಾಮಯ್ಯ ಅವರ ಜೊತೆ ಮಾಜಿ ಸಚಿವರಾದ ಎಸ್‌.ಎಸ್. ಮಲ್ಲಿಕಾರ್ಜುನ್, ಝಮೀರ್ ಅಹ್ಮದ್ ಇದ್ದರು.

ಮಂಗಳವಾರ ಗ್ಯಾರಂಟಿ ಕಾರ್ಡ್‌ ವಿತರಣೆ ಮಾಡುವ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ,' ಇಂದು ದಾವಣಗೆರೆಯ ಶಾಮನೂರಿನ ಹಲವು ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಗಳನ್ನು ಹಂಚಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರೆಂಟಿ ಕಾರ್ಡ್ ನಲ್ಲಿರುವ ಮೂರೂ ಭರವಸೆಗಳನ್ನು ಈಡೇರಿಸುವ ವಾಗ್ದಾನ ನೀಡಿದೆ' ಎಂದು ಬರೆದುಕೊಂಡಿದ್ದಾರೆ. 

Similar News