×
Ad

ಹಾಸನ ಜೆಡಿಎಸ್​ ಟಿಕೆಟ್​ ವಿಚಾರ: ಭವಾನಿ ರೇವಣ್ಣ-ಸ್ವರೂಪ್​ ಹೆಸರಿನ ನಡುವೆ ಈಗ ಮತ್ತೊಂದು ಹೆಸರು!

Update: 2023-03-15 12:41 IST

ಹಾಸನ: ಜೆಡಿಎಸ್ ನ ಭದ್ರಕೋಟೆಯಾಗಿರುವ ಹಾಸನ ವಿಧಾನ ಸಭಾ ಕ್ಷೇತ್ರದ ಟಿಕೆಟ್ ವಿಚಾರ ಹೊಸ ತಿರುವು ಪಡೆದುಕೊಂಡಿದೆ. ಆಕಾಂಕ್ಷಿಗಳಾದ ಭವಾನಿ ರೇವಣ್ಣ- ಎಚ್.ಪಿ ಸ್ವರೂಪ್​ ಹೆಸರಿನ ನುಡುವೆ ಮತ್ತೊಂದು ಹೆಸರು ಕೇಳಿ ಬರುತ್ತಿದೆ.

ಈಗಾಗಲೇ ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಭವಾನಿ ರೇವಣ್ಣ ಹಾಗೂ ಎಚ್.ಪಿ ಸ್ವರೂಪ್ ಅವರ ಅಭಿಮಾನಿಗಳು ಟಿಕೆಟ್ ಘೋಷಿಸುವಂತೆ ಪಟ್ಟು ಹಿಡಿದಿದ್ದು, ಅಂತಿಮವಾಗಿ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ ಕೊಟ್ಟರೆ ಟಿಕೆಟ್ ಕೈ ತಪ್ಪಿದವರ​ ಬೆಂಬಲಿಗರು ಅಸಮಾಧಾನಗೊಳ್ಳುವ ಸಾಧ್ಯತೆಗಳು ಇವೆ. ಹೀಗಾಗಿ ಜೆಡಿಎಸ್​ನ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅದ್ಯಕ್ಷ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. 

[ಕೆ.ಎಂ.ರಾಜೇಗೌಡ - ಜೆಡಿಎಸ್​ನ ನಾಯಕ]

ಕೆ.ಎಂ.ರಾಜೇಗೌಡ ಹೇಳುವುದೇನು? 

ನನ್ನಲ್ಲಿ ಈ ವಿಚಾರದ ಬಗ್ಗೆ ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ರೇವಣ್ಣ ಅಲ್ಲದೇ, ದೊಡ್ಡ ಗೌಡರು ಕೂಡ ಮಾತನಾಡಿದ್ದಾರೆ. ಈ ವೇಳೆ ನನ್ನ ಅಭಿಪ್ರಾಯ ಕೇಳಿದ್ದಾರೆ. ಅವರ ಕುಟುಂಬ ಸಂಪೂರ್ಣ ಬೆಂಬಲ, ಸಹಕಾರ ಕೊಟ್ಟರೆ ಈ ಕ್ಷೇತ್ರದಲ್ಲಿ ನನಗೆ ಅನುಕೂಲ ಆಗಲಿದೆ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ ಎಂದು ತಿಳಿಸಿದರು. 

'ರೇವಣ್ಣ ಅವರು ಕೂಡ ನನ್ನ ಹೆಸರನ್ನು ಪ್ರಸ್ತಾಪಿಸಿದ್ದು, ನನಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ' ಎಂದು ತಿಳಿಸಿದರು. 

'ಎಚ್.ಡಿ ದೇವೇಗೌಡ ಅವರು ಕೂಡ ಫೋನ್ ನಲ್ಲಿ ಮಾತನಾಡಿ, ಸಂದರ್ಭಕ್ಕೆ ರೆಡಿ ಇರು' ಎಂದು ಹೇಳಿದ್ದಾರೆ ಎಂದು  ಕೆ.ಎಂ.ರಾಜೇಗೌಡ ಮಾಧ್ಯಮಗಳಿಗೆ ತಿಳಿಸಿದರು. 

Similar News