'ರಸ್ತೆ ಕಿತ್ತು ಬಂದಿಲ್ಲ' ಎಂದು ಟ್ವಿಟರ್ ನಲ್ಲಿ ಫೋಟೊ ಹಂಚಿಕೊಂಡ ಪ್ರತಾಪ್ ಸಿಂಹ: ಸಂಶಯ ವ್ಯಕ್ತಪಡಿಸಿದ ನೆಟ್ಟಿಗರು

ಜನರ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ? ಎಂದು ಪ್ರಶ್ನಿಸಿದ ಕಾಂಗ್ರೆಸ್

Update: 2023-03-15 10:52 GMT

ರಾಮನಗರ: ಉದ್ಘಾಟನೆಯಾದ ಮರುದಿನವೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಿತ್ತುಕೊಂಡು ಬಂದಿದೆ. ರಸ್ತೆ ಕಿತ್ತು ಬಂದ ಹಿನ್ನೆಲೆ ಈ ಜಾಗದಲ್ಲಿ ದುರಸ್ತಿ ಕಾರ್ಯ ಆರಂಭಗೊಂಡಿದ್ದು, ಅದರ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ ಸಿಂಹ, ‘ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಸರಿಪಡಿಸಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಆದರೆ ಅವರು ಹಂಚಿಕೊಂಡಿರುವ ಫೋಟೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ. 

ಕಿತ್ತು ಹೋಗಿದೆ ಎನ್ನಲಾದ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿರುವ ಫೋಟೊದಲ್ಲಿ ರಸ್ತೆ ತಡೆಗೋಡೆಯ ಬಣ್ಣ ಎರಡು ಬದಿಯಲ್ಲಿ ಕಪ್ಪು-ಬಿಳಿ ಬಣ್ಣವಿದ್ದರೆ, ಪ್ರತಾಪ್ ಸಿಂಹ ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಹಳದಿ- ಕಪ್ಪು ಬಣ್ಣವಿದೆ. ಈ  ಕುರಿತು ಹಲವರು ಪ್ರಶ್ನೆ ಮಾಡಿದ್ದಾರೆ. 

'ಪ್ರತಾಪ್ ಸಿಂಹ ಯಾಕ್ ಹಿಂಗ್ ಆದ್ರು? ಅಲ್ಲಿ ಕಿತ್ತೊಗಿರೋ ರಸ್ತೇನೆ ಬೇರೆ, ಇಲ್ಲಿ ಅವರು ಹಾಕಿರೋ ಪಟನೇ ಬೇರೆ? ಸುಳ್ಳು ಸುದ್ದಿ ಹಾಕಿ ದಾರಿ ತಪ್ಪಿಸಬೇಡಿ ಅದರ ಬದಲು ಸರಿಪಡಿಸುವ ಅಂತೇಳಿ , ಮರ್ಯಾದೆ ಉಳಿಸಿಕೊಳ್ಳಿ' ಎಂದು ರವಿ ಎಂಬವರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

'ಪ್ರತಾಪ್ ಸಿಂಹ ಅವರು ಕಿತ್ತೋಗಿರೊ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಸಮರ್ಥನೆ ಮಾಡೋದಿಕ್ಕೆ ಅದೆಲ್ಲಿದ್ದೋ ರಸ್ತೆಯ ಫೋಟೋವನ್ನು ಹಂಚಿದ್ದಾರೆ. ಕಿತ್ತೋಗಿರೊ ರಸ್ತೆಯ ಎರಡು ಬದಿಯಲ್ಲಿ ಕಪ್ಪು-ಬಿಳಿ ಬಣ್ಣವಿದ್ರೆ ಪ್ರತಾಪ ಸಮರ್ಥನೆ ಮಾಡಿ ಹಾಕಿರುವ ಚಿತ್ರದಲ್ಲಿ  ಹಳದಿ- ಕಪ್ಪು ಬಣ್ಣವಿದೆ. ಮರ್ಯಾದೆ ಇಲ್ಲ ಅಂತ ಗೊತ್ತಿದೆ ಆದ್ರೆ ತಮಿಗೆ ಕಿಂಚಿತ್ತೂ ಮಾನ ಮರ್ವಾದೆ ಇಲ್ಲವೆಂದು ಈ ರೀತಿಯಲ್ಲಿ ಜಗಜ್ಜಾಹೀರು ಮಾಡಬಾರದು' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

''ಜನರ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ?''

''ಮಾನ್ಯ ಸಂಸದರೇ, ಯಾರ #KiviMeleHoova ಇಡ್ತೀದಿರಿ? ಒಂದರಲ್ಲಿ ಹಳದಿ ಪಟ್ಟಿ, ಮತ್ತೊಂದರಲ್ಲಿ ಬಿಳಿ ಪಟ್ಟಿ, ಜನರ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ? ಅಂದಹಾಗೆ ನ್ಯೂನ್ಯತೆಗಳಿರುವ ರಸ್ತೆಯನ್ನು ತುರತುರಿಯಲ್ಲಿ ಉದ್ಘಾಟಿಸಿದ್ದೇಕೆ? ಇಂತಹ ಹಲವು ನ್ಯೂನ್ಯತೆಗಳಿಗೆ 80 ಅಪಘಾತಗಳಾದವೇ? ನ್ಯೂನ್ಯತೆಯ ರಸ್ತೆಗೆ ಜನ ಟೋಲ್ ನೀಡಬೇಕೆ?'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

Full View

Similar News