ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ ಬಿಡುಗಡೆ

Update: 2023-03-16 14:36 GMT

ಬೆಂಗಳೂರು, ಮಾ. 16: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಮಾ.20ರಿಂದ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಲಾಗುವುದು. ಇದಕ್ಕಾಗಿ ಎರಡು ದೂರವಾಣಿ ಸಂಖ್ಯೆ 080- 2331 0075, 080 2331 0076 ನ್ನು ಮೀಸಲಿಡಲಾಗಿದೆ.

ಈ ‘ಸಹಾಯವಾಣಿ’ಯು ಮಾ.20ರಿಂದ ಮಾ.28ರ ವರೆಗೆ ಪ್ರತಿ ದಿನ ಅಪರಾಹ್ನ 3ರಿಂದ ಸಂಜೆ 7.30 ಗಂಟೆಯ ವರೆಗೆ ಹಾಗೂ ಮಾ.26ರ ಬೆಳಗ್ಗೆ 11ಗಂಟೆಯಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ಮಾ.31ರಿಂದ ಮಾ.15ರ ವರೆಗೆ ನಿಯಂತ್ರಣ ಕೊಠಡಿಯಾಗಿ ಬೆಳಗ್ಗೆ 10ರಿಂದ ಮದ್ಯಾಹ್ನ 2ಗಂಟೆಯ ವರೆಗೆ ಕಾರ್ಯನಿರ್ವಹಿಸಲಾಗುತ್ತದೆ. 

ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಮಾ.20ರ ಮಧ್ಯಾಹ್ನ 3ಗಂಟೆಗೆ ಪ್ರಾರಂಭಿಸಲಾಗುವುದು. ಇದಕ್ಕಾಗಿ ಎರಡು ದೂರವಾಣಿ ಸಂಖ್ಯೆ 080- 2331 0075, 080 2331 0076ನ್ನು ಮೀಸಲಿಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ. 

Similar News