×
Ad

ವಿಜಯ ಸಂಕಲ್ಪ ಯಾತ್ರೆ | ಗದಗ ನಗರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್ ಶೋ

Update: 2023-03-16 22:52 IST

ಗದಗ: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ನಗರದಲ್ಲಿ ಗುರುವಾರ  ರೋಡ್ ಶೋ ನಡೆಸಿದರು.

ಈ ವೇಳೆ ಮಾತನಾಡಿದ ಸ್ಮೃತಿ ಇರಾನಿ, 'ಚುನಾವಣೆ ದೇಶದ ಸ್ವಾಭಿಮಾನದ ಉಳಿವಿಗಾಗಿ ಹೋರಾಟ, ಒಂದೆಡೆ ನಾವು ಮಾತೃಭೂಮಿಗೆ ತಾಯಿ ಎಂದು ನಮಿಸುತ್ತೇವೆ, ಇನ್ನೊಂದೆಡೆ ಕೆಲವರು ವಿದೇಶಿ ನೆಲದಲ್ಲಿ ಮಾತೃಭೂಮಿಯನ್ನು ಅವಮಾನಿಸುತ್ತಾರೆ. ಅಂತಹವರನ್ನು ನಾವು ವಿರೋಧಿಸಬೇಕು' ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. 

ನಗರದ ಮುಳಗುಂದ ನಾಕಾದಿಂದ ಆರಂಭವಾದ ರೋಡ್ ಶೋ ರಾಚೋಟೇಶ್ವರ ದೇವಸ್ಥಾನ ರಸ್ತೆ, ಬಸವೇಶ್ವರ ಸರ್ಕಲ್, ಸ್ಟೇಷನ್ ರಸ್ತೆ, ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ಸಾಗಿತು.

ರೋಡ್ ಶೋನಲ್ಲಿ ಸಚಿವರಾದ ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ಸಂಸದ ಶಿವಕುಮಾರ್ ಉದಾಸಿ, ಮುಖಂಡ ಅನಿಲ‌ಮೆಣಸಿನಕಾಯಿ, ಸೇರಿ ಹಲವಾರು ನಾಯಕರು ಭಾಗಿಯಾಗಿದ್ದರು.

Similar News