ಕಡೂರು: ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಬೃಹತ್ ರೋಡ್ ಶೋ

Update: 2023-03-17 15:06 GMT

ಕಡೂರು: ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಕಡೂರು ಪಟ್ಟಣದಲ್ಲಿ ಶುಕ್ರವಾರ ನಡೆದ ಬೃಹತ್ ಬೈಕ್ ಮತ್ತು ಆಟೊ ರ್ಯಾಲಿ ಹಾಗೂ ರೋಡ್ ಶೋ ನಡೆಯಿತು.

ಮೆರವಣಿಗೆಯ ಆಕರ್ಷಣೆಯಾಗಿ ಕೇರಳದ ಚಂಡೆವಾದ್ಯ, ಮಂಗಳೂರಿನ ಗೊಂಬೆಮೇಳ ಮತ್ತು ಹುಲಿವೇಷ, ಕರಾವಳಿಯ ಡ್ರಂ ಸೆಟ್ ಜನಮನ ಸೆಳೆಯಿತು. ಗೊಂಬೇಮೇಳದಲ್ಲಿ ಬಾಹುಬಲಿ ಚಿತ್ರದ ಕಟ್ಟಪ್ಪ ವೇಷಧಾರಿಗಳು ನೋಡುಗರ ಕಣ್ಮನ ಸೆಳೆದರು. 

ಬೆಳಗ್ಗೆ ಚಿಕ್ಕಮಗಳೂರು ರಸ್ತೆಯ ರಾಜೀವಗಾಂಧಿ ಬಡಾವಣೆ ಬಳಿ ಇರುವ ಶ್ರೀ ಆಂಜನೇಯ ದೇವಾಲಯದಲ್ಲಿ ಶಾಸಕ ಬೆಳ್ಳಿಪ್ರಕಾಶ್ ಪೂಜೆ ಸಲ್ಲಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ನಂತರ ಗೃಹಸಚಿವ ಅರಗ ಜ್ಞಾನೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಸಿ. ಕಲ್ಮುರಡಪ್ಪ ಮುಂತಾದವರು ರ್ಯಾಲಿಯನ್ನು ಸೇರಿಕೊಂಡು ವಿಜಯಸಂಕಲ್ಪ ಯಾತ್ರೆಯ ರಥವನ್ನು ಏರಿದರು.

ಎತ್ತ ನೋಡಿದರು ಕೇಸರಿ ಧ್ವಜದ ರಂಗು, ಬಿಜೆಪಿ ಗೀತೆಗೆ ಕುಣಿದು ಕುಪ್ಪಳಿಸುವ ಯುವಜನತೆ. ಸಾವಿರಾರು ಬೈಕ್‍ಗಳು ಮತ್ತು ಆಟೋಗಳು ಇದ್ದರೂ ಉಂಟಾಗದ ಟ್ರಾಫಿಕ್ ಜಾಮ್, ಕಾರ್ಯಕರ್ತರ ಅಭಿಮಾನಿಗಳ ಶಿಸ್ತು ಗಮನಸೆಳೆಯಿತು. ಎಪಿಎಂಸಿ ಆವರಣದಲ್ಲಿ ಸಾವಿರಾರು ಕಾರ್ಯಕರ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ರ್ಯಾಲಿಯೂ ಚಿಕ್ಕಮಗಳೂರು ರಸ್ತೆಯಿಂದ ಕನಕವೃತ್ತದಿಂದ ಹಾಯ್ದು, ಹೊಸ ಬಸ್ ನಿಲ್ದಾಣದ ಎದುರು ಸಂಗೊಳ್ಳಿರಾಯಣ್ಣ ಪ್ರತಿಮೆ ದಾಟಿ, ಯು.ಬಿ. ರಸ್ತೆಯಲ್ಲಿ ಸಾಗಿ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಲ್‍ವಿ ವೃತ್ತದವರೆಗೆ ಸಾಗಿದ ರ್ಯಾಲಿ ಸಮಾಪ್ತಿಯಾಯಿತು.

Similar News