ಮಹಿಳೆಯೋರ್ವರು ಅಳುತ್ತಿದ್ದರೂ ನಿರ್ಲಕ್ಷಿಸಿ ತೆರಳಿದ ಸಿಎಂ ಬೊಮ್ಮಾಯಿ: ಕಾಂಗ್ರೆಸ್ ಆರೋಪ

Update: 2023-03-17 16:49 GMT

ಬೆಂಗಳೂರು: ಜನಸಾಮಾನ್ಯರ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ದರ್ಪ ಮೆರೆದಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಆರೋಪಿಸಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಬೆಂಗಳೂರಿನ ಆರ್‌ಟಿ ನಗರ ನಿವಾಸದ ಎದುರು ಸಾರ್ವಜನಿಕರ ಅಹವಾಲು ಆಲಿಸುವ ವೇಳೆಯಲ್ಲಿ ಮಹಿಳೆಯೊಬ್ಬರು ಅಳುತ್ತಿದ್ದರೂ ಅವರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. 

“ಮುಖ್ಯಮಂತ್ರಿ ಹುದ್ದೆ ಎಂದರೆ ದರ್ಪ, ದೌಲತ್ತು, ಅಹಂಕಾರ ಪ್ರದರ್ಶಿಸುವ ಹುದ್ದೆಯಲ್ಲ. ಜನರ ನೋವು ಆಲಿಸಿ, ಪರಿಹರಿಸುವ ಜನಸೇವೆಯ ಶ್ರೇಷ್ಠ ಸ್ಥಾನ.” ಎಂದು ಕಾಂಗ್ರೆಸ್ ಟೀಕಿಸಿದೆ.

"ಜನರ ನೋವು ಆಲಿಸಿ, ಪರಿಹರಿಸುವ ಜನಸೇವೆಯ ಶ್ರೇಷ್ಠ ಸ್ಥಾನ. ಮಹಿಳೆಯೊಬ್ಬರ ಅಳುವಿನ ಅಳಲು ಕೇಳಿಸಿದರೂ ಕೇಳಿಸದಂತೆ ನಿರ್ಲಕ್ಷಿ ಹೋದ ಬಸವರಾಜ ಬೊಮ್ಮಾಯಿ ಅವರು ಕಾಮನ್ ಮ್ಯಾನ್ ಸಿಎಂ ಎಂದು ಕರೆದುಕೊಳ್ಳುವುದಕ್ಕಿಂತ ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದರೆ ಸೂಕ್ತ!" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್-ಎಸ್‍ಡಿಪಿಐ ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು: ಶೋಭಾ ಕರಂದ್ಲಾಜೆ 

Similar News