ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ ಎನ್‍ಐಎ
ಬೆಂಗಳೂರು: ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ಐಎಸ್‍ನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಿದ್ದ ಶಿವಮೊಗ್ಗ ಇಸ್ಲಾಮಿಕ್ ಸ್ಟೇಟ್(ಐಎಸ್) ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಚಾರ್ಜ್‍ಶೀಟ್ ಸಲ್ಲಿಸಿದೆ.
2022ರ ಆ.15ರಂದು ಆರೋಪಿ ಜಬೀವುಲ್ಲಾ ಮತ್ತು ಇತರರು ಶಿವಮೊಗ್ಗದಲ್ಲಿ ಪ್ರೇಮ್‍ಸಿಂಗ್ ಎಂಬಾತನಿಗೆ ಇರಿದಿದ್ದರು. ಈ ಕೇಸ್‍ನ ಕುರಿತು ಶಿವಮೊಗ್ಗ ಪೊಲೀಸರು ತನಿಖೆ ನಡೆಸಿದ್ದರು. 2022ರ ಸೆಪ್ಟೆಂಬರ್‍ನಲ್ಲಿ ಈ ಪ್ರಕರಣವನ್ನು ಎನ್‍ಐಎ ತನ್ನ ಸುಪರ್ದಿಗೆ ತೆಗೆದುಕೊಂಡು ಮರು ತನಿಖೆಗೆ ಕೈಗೊಂದು ಇದೀಗ ಚಾರ್ಜ್‍ಶೀಟ್ ಸಲ್ಲಿಸಿದೆ.
ಶಿವಮೊಗ್ಗ ಇಸ್ಲಾಮಿಕ್ ಸ್ಟೇಟ್(ಐಎಸ್) ಪ್ರಕರಣದಲ್ಲಿ ಮಾಜ್ ಮುನೀರ್ ಅಹಮದ್(23 ವರ್ಷ) ಮತ್ತು ಸೈಯದ್ ಯಾಸಿನ್ (22 ವರ್ಷ) ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 121 ಎ ಮತ್ತು 122, ಯುಎ (ಪಿ) ಕಾಯ್ದೆ, 1967 ರ ಸೆಕ್ಷನ್ 18, 18 ಬಿ, 20 ಮತ್ತು 38 ಮತ್ತು ಇಎಸ್ ಕಾಯ್ದೆ, 1908 ರ ಸೆಕ್ಷನ್ 4 (ಐ) ಮತ್ತು 5 ರ ಅಡಿ ಪ್ರಕರಣ ದಾಖಲಿಸಲಾಗಿದೆ.