×
Ad

ಮಡಿಕೇರಿ | ಮಹಿಳೆಯ ಅತ್ಯಾಚಾರ ಆರೋಪ: ಚಾಲಕನ ಬಂಧನ

Update: 2023-03-17 23:24 IST

ಮಡಿಕೇರಿ: ಮಹಿಳೆಯನ್ನು ಅತ್ಯಾಚಾರ ಮಾಡಿದ ಆರೋಪದಡಿ ನಾಪತ್ತೆಯಾಗಿದ್ದ ಆರೋಪಿಯನ್ನು ಕೊಡಗು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊನ್ನಂಪೇಟೆಯಲ್ಲಿ ಆಟೋ ಚಾಲಕನಾಗಿರುವ ಮಣಿಕಂಠ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

ಪೊನ್ನಂಪೇಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು ಮಾ.12ರಂದು ಸಂಜೆ 5.30 ರ ವೇಳೆಗೆ ಕೆಲಸ ಮುಗಿಸಿ ಮನೆಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮಾರುತಿ ಓಮಿನಿ ಕಾರ್ ನಲ್ಲಿ ಬಂದು ನಾನು ಕುಂದ ಕಡೆ ಹೋಗುತ್ತಿದ್ದು, ನೀವು ಬರುತ್ತೀರ ಎಂದು ಮಹಿಳೆಯನ್ನು ಕೇಳಿದ್ದಾನೆ. ಈ ವೇಳೆ ಬಿ.ಶೆಟ್ಟಿಗೇರಿ ಕಡೆ ಬರುತ್ತೇನೆ ಎಂದು ಮಹಿಳೆ ಕಾರಿನಲ್ಲಿ ಕುಳಿತಿದ್ದಾರೆ ಎನ್ನಲಾಗಿದೆ.

ಸ್ವಲ್ಪ ದೂರ ತೆರಳಿದ ನಂತರ ಕಾರ್ ನಿಲ್ಲಿಸಿದ ಆರೋಪಿ ಅತ್ಯಾಚಾರ ಎಸಗಿದ್ದಲ್ಲದೆ, ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿ, ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ಮಾ.16ರಂದು ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಪೊನ್ನಂಪೇಟೆಯಲ್ಲಿ ಆಟೋ ಚಾಲಕನಾಗಿರುವ ಮಣಿಕಂಠ ಎಂಬ ಆರೋಪಿಯನ್ನು ವಶಕ್ಕೆ ಪಡೆದರು. 

ವಿರಾಜಪೇಟೆ ಡಿವೈಎಸ್‍ಪಿ ಆರ್.ಮೋಹನ್ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ವಸಂತ.ಕೆ.ಎಂ, ಠಾಣಾಧಿಕಾರಿ ಸಿದ್ದರಾಜು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. 

Similar News