ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ: ನಟ ಚೇತನ್ ಬಂಧನ ಖಂಡಿಸಿದ ಸಿದ್ದರಾಮಯ್ಯ

Update: 2023-03-21 16:53 GMT

ಮೈಸೂರು: ಮಾ.21: ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾರ ವಿರುದ್ಧ ಪೋಸ್ಟ್ ಮಾಡಿದ್ದಾರೆಂಬ ಆರೋಪದ ಮೇರೆಗೆ ನಟ ಚೇತನ್ ಅಹಿಂಸಾ ಅವರ ಬಂಧನದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಟ ಚೇತನ್ ಬಂಧನ ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವಾಗಿದೆ'' ಎಂದು ಹೇಳಿದರು. 

''ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ವಾಕ್​ ಸ್ವಾತಂತ್ರ್ಯ ನೀಡಲಾಗಿದೆ. ಹೇಳಿಕೆ ನೀಡಿದ ಮಾತ್ರಕ್ಕೆ ಬಂಧಿಸುವುದು ಸರಿಯಲ್ಲ. ಕೋರ್ಟ್​ನಲ್ಲಿ ಇಂತಹ ಕೇಸ್​ ನಿಲ್ಲುವುದಿಲ್ಲ'' ಎಂದು ತಿಳಿಸಿದರು. 

''ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಿಡುಗಡೆ''

''ಕಾಂಗ್ರೆಸ್ ನ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಿಡುಗಡೆ ಆಗುತ್ತಿದ್ದು, ಅದರಲ್ಲಿ ವಿಧಾನಸಭೆ ಕ್ಷೇತ್ರಗಳ ಒಂದೇ ಹೆಸರಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಅದರಲ್ಲಿ ನನ್ನ ಹೆಸರು ಇರುತ್ತದೊ ಗೊತ್ತಿಲ್ಲ. ನನ್ನ ಸ್ಪರ್ಧೆಯ ಬಗ್ಗೆ ಹೈಕಮಾಂಡ್‍ಗೆ ಬಿಟ್ಟಿದ್ದೇನೆ. ಅವರು ಇನ್ನೂ ಯಾವ ತೀರ್ಮಾನವನ್ನು  ತೆಗೆದುಕೊಂಡಿಲ್ಲ'' ಎಂದು ಹೇಳಿದರು.

''ಪ್ರಧಾನ ಮಂತ್ರಿ ನರೇಂದ್ರ ಮೋದಿ ಪದೇ ಪದೇ ಕರ್ನಾಟಕಕ್ಕೆ ಬಂದೂ ಪ್ರಯೋಜನವಿಲ್ಲ, ನಮ್ಮ ಕಾಲದಲ್ಲಿ ಆಗ ಬೆಂಗಳೂರು-ಮೈಸೂರು  ರಸ್ತೆ  ಮಂಜೂರಾತಿ, ಧಾರವಾಡ ಐಐಟಿಗೆ ಭೂಮಿ ನೀಡಿದ್‍ದು, ನಾವು ಇವರು ಬರೀ ಉದ್ಘಾಟನೆ ಮಾಡಲು ಬರುತಿದ್ದಾರೆ. ಎಲ್ಲವೂ ಜನರಿಗೆ ಗೊತ್ತಿದೆ'' ಎಂದು ಮೋದಿ ವಿರುದ್ಧ ವಾಗ್ದಾಳಿ ನಡಸಿದರು.

Similar News