ನಿರ್ಮಲಾನಂದನಾಥರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಳಿಗೆ ಅಲ್ಲ: ಅಡ್ಡಂಡ ಕಾರ್ಯಪ್ಪ

''ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ಬೇಡ ಎಂದು ಹೇಳಿದ್ದು ಸರಿಯಲ್ಲ''

Update: 2023-03-24 07:20 GMT

ಬೆಂಗಳೂರು: 'ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳು. ಅವರು ಇದ್ದರು ಎನ್ನುವುದಕ್ಕೆ ಆಧಾರವಿಲ್ಲ. ಹಾಗಾಗಿ ಈ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು' ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಗೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಗುರುವಾರ ಕನ್ನಡದ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ''ನಿರ್ಮಲಾನಂದನಾಥರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಳಿಗೆ ಅಲ್ಲ, ಒಕ್ಕಲಿಗ ಸಮುದಾಯದ ಒಂದಾಗಿಟ್ಟುಕೊಳ್ಳುವುದೇ ಅವರ ಕೆಲಸ. ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲ'' ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ. 

''ಸ್ವಾಮೀಜಿಗಳು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಇದ್ದಾಗ ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಕುಮಾರಸ್ವಾಮಿ ನಮ್ಮವ, ಅವರ ಸರ್ಕಾರ ಬೀಳದಂತೆ ನೋಡಿಕೋ ಅಂತ ಹೇಳಿದ್ದರು'' ಎಂದು ದೂರಿದ್ದಾರೆ. 

''ಒಕ್ಕಲಿಗರಲ್ಲಿ ಸಿಟಿ ರವಿ ಇದ್ದಾರೆ, ಅಶೋಕ್‌ ಇದ್ದಾರೆ, ಅಶ್ವತ್ಥ ನಾರಾಯಣ ಇದ್ದಾರೆ. ಸ್ವಾಮೀಜಿಗಳಿಗೆ ಅವರೆಲ್ಲರೂ ಒಂದು, ಹಾಗಾಗಿ, ಆ ವಿಚಾರ ಪ್ರಸ್ತಾಪಿಸಬೇಡಿ ಎಂದು ಹೇಳಿರಬಹುದು'' ಎಂದು ಅಭಿಪ್ರಾಯಿಸಿದ್ದಾರೆ. 

''ಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ, ಆದರೆ ಉರಿಗೌಡ, ನಂಜೇಗೌಡ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ ಈ ಬಗ್ಗೆ ಸಂಶೋಧನೆ ನಡೆಯಲಿ ಅನ್ನಬೇಕಿತ್ತು. ಆದರೆ ಶ್ರೀಗಳು ಕುಮಾರಸ್ವಾಮಿ ಪರವಾಗಿ ನಿಂತಿದ್ದಾರೆ. ಇದೆಲ್ಲ ಒಂದು ಥರದ ಜಾತಿ ರಾಜಕಾರಣದ ಪ್ರಸಂಗ'' ಎಂದು ಹೇಳಿದ್ದಾರೆ. 

ಇದನ್ನೂ ಓದಿ... ಇನ್ನಷ್ಟು ಬಾರಿ ಜೈಲಿಗೆ ಹಾಕಿದರೂ ಹೆದರಲ್ಲ...: ಜೈಲಿನಿಂದ ಬಿಡುಗಡೆಗೊಂಡ ನಟ ಚೇತನ್ ಅಹಿಂಸಾ

Full View

Similar News