ತಾಯಿಯಿಂದ ಬೇರ್ಪಟ್ಟು ಡ್ಯಾಂ ಬಳಿ ನಿಂತಿದ್ದ ಮರಿಯಾನೆಯ ರಕ್ಷಣೆ

Update: 2023-03-24 06:30 GMT

ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಪಾರ್ಲರ್ ಬೀಟ್ ಅರಣ್ಯ ಪ್ರದೇಶದ ತಮಿಳನಾಡಿನ ಮೆಟ್ಟೂರು ಜಲಾಶಯದ ಹಿನ್ನೀರಿನಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆಮರಿಯನ್ನು ಸಾರ್ವಜನಿಕರು ರಕ್ಷಿಸಿ ಕೊನೆಗೂ ತಾಯಿ ಮಡಿಲು ಸೇರಿಸಿರುವ ಘಟನೆ ವರದಿಯಾಗಿದೆ.

ಕರ್ನಾಟಕ ತಮಿಳುನಾಡು ವ್ಯಾಪ್ತಿಗೆ ಸೇರಿದ ಪಾಲರ್ ಬಿಟ್ ಅರಣ್ಯ ಪ್ರದೇಶದ ಮೆಟ್ಟೂರು ಜಲಾಶಯದ ಹಿನ್ನೀರಿನಲ್ಲಿ ನದಿ ದಾಟುವಾಗ ತಾಯಿ ಆನೆಯಿಂದ ಎರಡು ದಿನದ ಮರಿ ಆನೆ ಬೇರ್ಪಟ್ಟಿದ್ದು ತಾಯಿ ಆನೆಗಾಗಿ ಹಂಬಲಿಸುತ್ತಿದ್ದ ಮರಿಯಾನೆ  ಕೊನೆಗೂ ತಾಯಿ ಮಡಿಲು ಸೇರಿದೆ.

ಮೆಟ್ಟೂರು ಜಲಾಶಯದ ಹಿನ್ನೀರು ಸಂಗ್ರಹವಾಗುವ ಸ್ಥಳವು ಬಹುತೇಕ ಅರಣ್ಯದಿಂದ ಕೂಡಿದ್ದು ಕರ್ನಾಟಕ ಗಡಿಯಂಚಿನವರೆಗೂ ಮೆಟ್ಟೂರಿನ ಹಿನ್ನಿರು ಆವೃತವಾಗಿದೆ ಅರಣ್ಯದಿಂದ ಕೂಡಿರುವ ಈ ಪ್ರದೇಶದಲ್ಲಿ ಹೆಚ್ಚಾಗಿ ಆನೆಗಳ ಆವಾಸಸ್ಥಾನವಿದ್ದು ಕರ್ನಾಟಕದಿಂದ ತಮಿಳುನಾಡು ಅರಣ್ಯ ತಮಿಳುನಾಡಿನಿಂದ ಕರ್ನಾಟಕಕ್ಕೆ ನದಿ ಮಾರ್ಗವಾಗಿ ಆನೆಗಳು ಸಂಚರಿಸುತ್ತಿವೆ ಇದೇ ರೀತಿಯಾಗಿ ಗುರುವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಮರಿ ಆನೆ ಜೊತೆ ತಾಯಿ ಆನೆ ನದಿ ದಾಟುವ ಸಂದರ್ಭದಲ್ಲಿ ತಾಯಿಯಾನೆ ಹಿನ್ನೀರು ದಾಟಿ ಆಚೆ ಕಡೆಗೆ ಹೋಗಿ ಆಗಿತ್ತು. ಮರಿ ಆನೆ ಬೇರ್ಪಟ್ಟು ನೀರಿನಲ್ಲಿ ಮುಳುಗಿ ಸಾಯುವ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. 

ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಕೊಳತ್ತೂರಿಗೆ ತೆರಳುತ್ತಿದ್ದ ಸಾರ್ವಜನಿಕರು ಇದನ್ನು ಗಮನಿಸಿ ನದಿಯಲ್ಲಿ ಮುಳುಗುತ್ತಿದ್ದ ಆನೆಯನ್ನು ರಕ್ಷಿಸಿದ್ದಾರೆ.  ಸತತವಾಗಿ ಒಂದು ಗಂಟೆಗಳ ಕಾಲ ಆನೆಮರಿಯನ್ನು ಕಾಪಾಡಿಕೊಂಡು ತಮಿಳುನಾಡಿನ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ  ಮರಿಯನ್ನು ಒಪ್ಪಿಸಿ ತದನಂತರ ತಾಯಿ ಮಡಿಲಿಗೆ ಆನೆಮರಿಯನ್ನು ಸೇರಿಸಿದ್ದಾರೆ. 

Similar News