×
Ad

ರಾಜ್ಯಕ್ಕೆ ಆಗಮಿಸಿದ ಮೋದಿ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪರ ಸ್ವಾಗತ ಕೋರಿದ ಕಾಂಗ್ರೆಸ್!

Update: 2023-03-25 12:24 IST

ಬೆಂಗಳೂರು, ಮಾ.24: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹೊತ್ತಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಕರ್ನಾಟಕಕ್ಕೆ ಆಗಮಿಸಿದ್ದು, ದಾವಣಗೆರೆಯ್ಲಲಿ ಪಕ್ಷದ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಸರಣಿ ಟ್ವೀಟ್ ಗಳನ್ನ ಮಾಡಿರುವ ವಿಪಕ್ಷ ಕಾಂಗ್ರೆಸ್, ಲಂಚ ಪಡೆದ ಪ್ರಕರಣದಲ್ಲಿ  ಆರೋಪಿಯಾಗಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪರವಾಗಿ ಸ್ವಾಗತ ಕೋರುವ ಪೋಸ್ಟರ್ ಹಂಚಿಕೊಂಡಿದೆ. ಈ ಮೂಲಕ ಪ್ರಧಾನಿ ಮೋದಿಯವರ ಕಾಳೆಲೆದಿದೆ. 

''ಮಗನ ಮೂಲಕ ಲಂಚ ಪಡೆದ ಸಿಕ್ಕಿಬಿದ್ದರೂ ಒಂದೇ ದಿನದಲ್ಲಿ ಜಾಮೀನು ಅರ್ಜಿ ವಿಚಾರಣೆಯಾಗಿ, ಜಾಮೀನು ಮಂಜೂರಾಗಿ ಮೆರವಣಿಗೆ ಮಾಡಿಸಿಕೊಂಡ ಮಾಡಾಳ್ ವಿರೂಪಾಕ್ಷಪ್ಪರ ವತಿಯಿಂದ ನರೇಂದ್ರ ಮೋದಿ ಅವರಿಗೆ ಸುಸ್ವಾಗತ! 40% ಕಮಿಷನ್ ಸರ್ಕಾರದಲ್ಲಿ ಎಲ್ಲೆಲ್ಲೂ ಕೋಟಿ ಕೋಟಿ ಹಣ ಸಿಗುವಂತೆ ಮಾಡಿದ್ದು ಮೋದಿಯವರ ಸಾಧನೆ!'' ಎಂದು  #ElectionPrimeMinister ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಟ್ವೀಟ್ ಮಾಡಿದೆ. 

''ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ರೈತನ ಮನೆಯಲ್ಲೂ ಕೋಟಿ ಕೋಟಿ ಹಣ ಇರುವುದು ಸಾಮಾನ್ಯ ಸಂಗತಿಯಂತೆ! ಅದು ಕೇವಲ ಭ್ರಷ್ಟಾಚಾರದ ಫಸಲು ತೆಗೆಯುವ ಬಿಜೆಪಿಯ ರೈತರಲ್ಲಿ ಮಾತ್ರ! ರೈತರ ಆದಾಯ ಡಬಲ್ ಆಗದಿದ್ದರೂ ಬಿಜೆಪಿ ಭ್ರಷ್ಟರ ಆದಾಯ ಡಬಲ್ ಮಾಡಿದ ಮೋದಿಯವರು ನಿಜಕ್ಕೂ ಅಭಿನಂದನಾರ್ಹರು!'' ಎಂದು ಕುಟುಕಿದೆ. 

Similar News