×
Ad

ಪ್ರಧಾನಿ ಮೋದಿ ಬೆಂಗಾವಲು ಪಡೆಯತ್ತ ನುಗ್ಗಿದ ಯುವಕ: ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ

Update: 2023-03-25 23:07 IST

ಬೆಂಗಳೂರು: 'ದಾವಣಗೆರೆಯಲ್ಲಿ ಇಂದು (ಶನಿವಾರ) ಪ್ರಧಾನಿ ಮೋದಿ ರೋಡ್ ಶೋ ವೇಳೆ ಯಾವುದೇ ಭದ್ರತಾಲೋಪ ಆಗಿಲ್ಲ. ಅದೊಂದು ವಿಫಲ ಯತ್ನವಾಗಿತ್ತು' ಎಂದು  ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. 

ಈ ಕುರಿತು ಟ್ವಿಟರ್ ನಲ್ಲಿ ಘಟನೆಯ ವಿಡಿಯೋ ಹಂಚಿಕೊಂಡಿರುವ ಅವರು, 'ಪ್ರಧಾನಿ ಮೋದಿ ಬೆಂಗಾವಲು ಪಡೆಯತ್ತ ನುಗ್ಗಿದ ಯುವಕನನ್ನು ನಾನು ಮತ್ತು ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ತಕ್ಷಣ ವಶಕ್ಕೆ ಪಡೆದಿದ್ದೇವೆ. ಅದೊಂದು ವಿಫಲ ಯತ್ನವಾಗಿತ್ತು. ಮೋದಿಯವರ ವಾಹನದಿಂದ ಬಹಳ ದೂರದಲ್ಲೇ ವ್ಯಕ್ತಿಯನ್ನು ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.  

ನಗರದಲ್ಲಿ ಇಂದು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ವೇಳೆ ಅವರ ಬೆಂಗಾವಲು ಪಡೆಯತ್ತ ಯುವಕಮೋರ್ವ ನುಗ್ಗಿರುವ ಬಗ್ಗೆ ವರದಿಯಾಗಿತ್ತು. 

Similar News