ಸಂಸ್ಕೃತಿ ಇಲಾಖೆಯ ವಾರ್ಷಿಕ ಪ್ರಶಸ್ತಿಗಳು ಪ್ರಕಟ

Update: 2023-03-26 18:28 GMT

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೀಡುವ ಜಕಣಾಚಾರಿ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ. ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ ಸೇರಿ 2020-21 ಮತ್ತು 2021-22ನೇ ಸಾಲಿನ 14 ಪ್ರಶಸ್ತಿಗಳನ್ನು ಸರಕಾರ ಪ್ರಕಟಿಸಿದೆ. ಕೊರೋನ ಸಾಂಕ್ರಾಮಿಕದ ಕಾರಣದಿಂದ ಹಿಂದಿನ ವರ್ಷದಲ್ಲಿ ಪ್ರಶಸ್ತಿಯನ್ನು ಪ್ರಕಟಿಸಿರಲಿಲ್ಲ.

2020-21ನೇ ಸಾಲಿನ ಜಕಣಾಚಾರಿ ಪ್ರಶಸ್ತಿಗೆ ವಿಜಯನಗರದ ಹುಸೇನಿ 2021-22ನೇ ಸಾಲಿನ ಪ್ರಶಸ್ತಿಗೆ ಮೈಸೂರಿನ ಶ್ಯಾಮಸುಂದರ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. 2020-21ನೆ ಸಾಲಿನ ‘ಜಾನಪದ ಶ್ರೀ’ ಪ್ರಶಸ್ತಿಗೆ ರಾಯಚೂರಿನ ಮಾರೆಪ್ಪ ದಾಸರ ಮತ್ತು ಉತ್ತರ ಕನ್ನಡದ ಹುಸೇನಾ ಬಿ ಬುಡೇನ್ ಹಾಗೂ 2021-22ನೇ ಸಾಲಿನ ಪ್ರಶಸ್ತಿಗೆ ರಾಮನಗರದ ಡಾ.ಅಪ್ಪಗೆರೆ ತಿಮ್ಮರಾಜು ಮತ್ತು ಮೈಸೂರಿನ ಕುಮಾರಸ್ವಾಮಿ ಅವರು ಭಾಜನರಾಗಿದ್ದಾರೆ.

2020-21ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಧಾರವಾಡದ ಗಾಯತ್ರಿ ದೇಸಾಯಿ ಮತ್ತು 2021-22ಸಾಲಿನ ಪ್ರಶಸ್ತಿಗೆ ಕಲಬುರಗಿಯ ವಿಜಯ್ ಹಾಗರ ಗುಂಡಿಗಿ ಅವರಿಗೆ ನೀಡಲಾಗಿದೆ. 2020-21 ಸಾಲಿನ ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರದ ರಾಷ್ಟ್ರೀಯ ಅಲೆಮಾರಿ ಆಯೋಗದ ಮಾಜಿ ಅಧ್ಯಕ್ಷ ಭಿಕು ರಾಮ್‍ಜಿ ಇದಾತೆ ರತ್ನಗಿರಿ ಮತ್ತು 2021-22 ಸಾಲಿನ ಪ್ರಶಸ್ತಿಗೆ ಧಾರವಾಡದ ಡಾ.ವೀರಣ್ಣ ಆಯ್ಕೆಯಾಗಿದ್ದಾರೆ.

2020-2021 ಸಾಲಿನ ಚೌಡಯ್ಯ ಪ್ರಶಸ್ತಿಗೆ ಎಂ. ವಾಸುದೇವ ಮೋಹಿತ ಮತ್ತು 2021-22 ಸಾಲಿನ ಪ್ರಶಸ್ತಿಗೆ ದಿಲ್ಲಿಯ ಹರಿಪ್ರಸಾದ್ ಚೌರಾಸಿಯಾ ಆಯ್ಕೆಯಾಗಿದ್ದಾರೆ. ಪಾವಗಡದ ಜಪಾನಂದ ಸ್ವಾಮೀಜಿ ಮತ್ತು ಕೇರಳದ ಸದಾನಂದ ಮಾಸ್ಟರ್ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2021-22 ಸಾಲಿನ ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಕಾಸರಗೋಡಿನ ಡಾ.ರಮಾನಂದ ಬನಾರಿ ಮತ್ತು 2022-23 ಸಾಲಿನ ಪ್ರಶಸ್ತಿಗೆ ಕುಪ್ಪುಂನ ಎಂ.ಎನ್.ವೆಂಕಟೇಶ ಆಯ್ಕೆಯಾಗಿದ್ದಾರೆ. 

2020-21 ಸಾಲಿನ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಮೈಸೂರಿನ ಕೌಸಲ್ಯಾ ಧರಣೀಂದ್ರ ಮತ್ತು 2021-22 ಸಾಲಿನ ಪ್ರಶಸ್ತಿಗೆ ಧಾರವಾಡದ ಮಾಲತಿ ಪಟ್ಟಣ ಶೆಟ್ಟಿ ಆಯ್ಕೆಯಾಗಿದ್ದಾರೆ. 2021-22 ಸಾಲಿನ ಬಿ.ವಿ.ಕಾರಂತ ಪ್ರಶಸ್ತಿಗೆ ಬೆಂಗಳೂರಿನ ಡಾ. ಬಿ.ವಿ.ರಾಜಾರಾಂ ಮತ್ತು 2021-22 ಸಾಲಿನ ಪ್ರಶಸ್ತಿಗೆ ವಿಜಯನಗರದ ಅಬ್ದುಲ್ಲ ಪಿಂಜಾರ ಭಾಜನರಾಗಿದ್ದಾರೆ. 2020-21 ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಚಿತ್ರದುರ್ಗದ ಕುಮಾರಸ್ವಾಮಿ ಮತ್ತು 2021-22 ಸಾಲಿನ ಪ್ರಶಸ್ತಿಗೆ ಕೊಪ್ಪಳದ ಬಾಬಣ್ಣ ಕಲ್ಮನಿ ಆಯ್ಕೆಯಾಗಿದ್ದಾರೆ. 

2020-21 ಸಾಲಿನ ಕುಮಾರವ್ಯಾಸ ಪ್ರಶಸ್ತಿಗೆ ಶಿವಮೊಗ್ಗದ ರಾಜಾರಾಂ ಮೂರ್ತಿ ಮತ್ತು 2021-22 ಸಾಲಿನ ಪ್ರಶಸ್ತಿಗೆ ಮೈಸೂರಿನ ಡಾ. ಎಂ.ಕೆ.ರಾಮಶೇಷನ್ ಭಾಜನರಾಗಿದ್ದಾರೆ. 2020-21 ಸಾಲಿನ ಶಾಂತಲಾ ನಾಟ್ಯರಾಣಿ ಪ್ರಶಸ್ತಿಗೆ ಬೆಂಗಳೂರಿನ ಎಂ.ಆರ್.ಕೃಷ್ಣಮೂರ್ತಿ ಮತ್ತು 2021-22 ಸಾಲಿನ ಪ್ರಶಸ್ತಿಗೆ ಬಿ.ಎಸ್.ಸುನಂದಾದೇವಿ ಆಯ್ಕೆಯಾಗಿದ್ದಾರೆ. 

2020-21 ಸಾಲಿನ ಸಂತ ಶಿಶುನಾಳ ಶರೀಫರ ಪ್ರಶಸ್ತಿಗೆ ಪುತ್ತೂರು ನರಸಿಂಹ ನಾಯಕ್ ಮತ್ತು 2021-22 ಸಾಲಿನ ಪ್ರಶಸ್ತಿಗೆ ಚಂದ್ರಶೇಖರ ಜೋಯಿμÁ ಭಾಜನರಾಗಿದ್ದಾರೆ. ನಿಜಗುಣ ಪುರಂದರ ಪ್ರಶಸ್ತಿಗೆ 2021-22 ಸಾಲಿನಲ್ಲಿ ಎಂ.ಎಸ್.ಶೀಲಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಸ್ಮರಣಿಯನ್ನು ಹೊಂದಿರುತ್ತದೆ.

Similar News