42 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ

Update: 2023-03-28 17:31 GMT

ಬೆಂಗಳೂರು, ಮಾ.28: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧೆ ಕರ್ತವ್ಯ ನಿರ್ವಹಿಸುತ್ತಿರುವ 42 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಲಭಿಸಿದೆ.

ಈ ಕುರಿತಂತೆ ಒಳಾಡಳಿತ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದು, 2022ನೇ ಸಾಲಿನ ಮುಖ್ಯಮಂತ್ರಿ ಅವರ ಪದಕಗಳನ್ನು ನೀಡುವ ಸಂಬಂಧ ಒಟ್ಟು 100 ಅಧಿಕಾರಿ, ಸಿಬ್ಬಂದಿಗಳನ್ನು ಶಿಫಾರಸ್ಸು ಮಾಡಲಾಗಿತ್ತು.

ಅದರೆ, ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಶಂಕರ ನಾಯ್ಕ್, ಚಾಮರಾಜಪೇಟೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎರ್ರಿಸ್ವಾಮಿ, ಈಶಾನ್ಯ ವಿಭಾಗದ ಎಸಿಪಿ ಪಾಂಡುರಂಗ ಎಸ್ ಹೊರತುಪಡಿಸಿ ಪಟ್ಟಿಯಲ್ಲಿನ 97 ಮಂದಿಯನ್ನು ಸರಕಾರದ ಅನುಮೋದನೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ಪದಕ ನೀಡುವ ಬಗ್ಗೆ ಮುಖ್ಯಮಂತ್ರಿ ಅವ ಪದಕ ನಿಯಮಗಳಲ್ಲಿ ನಿಗಧಿಪಡಿಸಿರುವ ಎಲ್ಲ ಷರತ್ತುಗಳನ್ನು ಪೂರೈಸಿರುವ ಷರತ್ತಿಗೆ ಒಳಪಟ್ಟು 42 ಮಂದಿಗೆ ಪದಕ  ನೀಡಲಾಗಿದೆ:

ಪದಕ ಪೊಲೀಸರು: ಆರ್.ಶ್ರೀನಿವಾಸ್‌ಗೌಡ(ಡಿಪಿಪಿ, ಕೇಂದ್ರ ವಿಭಾಗ), ನಂಜುಂಡೇಗೌಡ(ಹೆಡ್ ಕಾನ್‌ಸ್ಟೇಬಲ್, ಪೂರ್ವ ಸಂಚಾರಿ ವಿಭಾಗ ಕಚೇರಿ, ಬೆಂಗಳೂರು), ರಮೇಶ್ ಚಂ.ಅವಜಿ(ಇನ್‌ಸ್ಪೆಕ್ಟರ್, ಸಿಇಎನ್ ವಿಜಯಪುರ).

ನವೀನ್ ಚಂದ್ರ ಜೋಗಿ(ಇನ್‌ಸ್ಪೆಕ್ಟರ್, ಸುಳ್ಯ ವೃತ್ತ ಪೊಲೀಸ್ ಠಾಣೆ), ರೇವಣ್ಣ(ಎಎಸ್‌ಐ, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ, ಬೆಂಗಳೂರು), ಮಾರುತಿ ಜಿ.ನಾಯಕ್(ಇನ್‌ ಸ್ಪೆಕ್ಟರ್, ಸುದ್ದುಗುಂಟೆಪಾಳ್ಯ, ಬೆಂಗಳೂರು), ಬಿ.ಮಹೇಶ್(ಪಿಎಸ್‌ಐ, ಎನ್‌ಐಎ), ಎಂ.ಮೋಹನ್ ಕುಮಾರ್ (ಹೆಡ್‌ಕಾನ್‌ಸ್ಟೇಬಲ್, ವಿಕಾಸಸೌಭ ಭದ್ರತೆ).

ಚೈತನ್ಯ(ಪಿಐ, ಕಬ್ಬನ್‌ಪಾರ್ಕ್ ಠಾಣೆ), ಬಿ.ಮಹೇಶ್(ಹೆಚ್‌ಕಾನ್‌ಸ್ಟೇಬಲ್, ಬ್ಯಾಾಟರಾಯನಪುರ ಸಂಚಾರ ಠಾಣೆ), ಎಸ್. ಜೈ ಜಗದೀಶ್(ಡಿಎಆರ್, ಶಿವಮೊಗ್ಗ ಜಿಲ್ಲೆೆ), ಕೆ.ಸಂತೋಷ್ ಕುಮಾರ್(ಪಿಎಸ್‌ಐ, ಮಂಗಳೂರು ಸಂಚಾರ ದಕ್ಷಿಣ ಠಾಣೆ), ಧರಣೇಶ್(ಡಿವೈಎಸ್ಪಿ ಸಂಚಾರ ಕೇಂದ್ರ ವಿಭಾಗ, ಬೆಂಗಳೂರು).

ಅರವಿಂದ ಕುಮಾರ್(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಬೆಂಗಳೂರು), ಅನಂತಕೃಷ್ಣ(ಎಎಸ್‌ಐ, ಸಿಸಿಬಿ ಬೆಂಗಳೂರು), ಪ್ರಕಾಶ್(ಎಎಸ್‌ಐ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು), ಮಣಿಕಂಠ(ಹೆಚ್‌ಕಾನ್‌ಸ್ಟೇಬಲ್, ಎಸಿಪಿ ಕಚೇರಿ ಸಂಚಾರ ಉಪವಿಭಾಗ, ಪಾಂಡೇಶ್ವರ ಮಂಗಳೂರು), ವಿಜಯ ಪ್ರಸಾದ್(ಡಿವೈಎಸ್ಪಿ, ಡಿಸಿಆರ್‌ಇ, ಕಾರವಾರ).

ಬಿ.ಕೆ.ಲಕ್ಷ್ಮಣ(ಹೆಡ್‌ಕಾನ್‌ಸ್ಟೇಬಲ್, ಶಾಸಕರ ಭವನ ಭದ್ರತೆ, ಬೆಂಗಳೂರು), ಎನ್.ಸುರೇಶ್(ಪಿಐ ಸಿಐಡಿ, ಬೆಂಗಳೂರು), ಬಿ.ಮಂಜುನಾಥ್(ಹೆಚ್‌ಕಾನ್‌ಸ್ಟೇಬಲ್, ವಿಕಾಸಸೌಧ ಭದ್ರತೆ, ಬೆಂಗಳೂರು), ಎಂ.ಎನ್.ರಾಜೇಂದ್ರ ನಾಯಕ್‌(ಪಿಎಸ್‌ಐ, ಕರಾವಳಿ ಕಾವಲು ಪೊಲೀಸ್ ಠಾಣೆ, ಹೆಜಮಾಡಿ), ವಿ.ಆರ್.ಶಬರೀಶ್(ಪಿಎಸ್‌ಐ, ವಿಜಯನಗರ ಠಾಣೆ, ಮೈಸೂರು), ಎಂ.ಅನಿತಾ ಕುಮಾರಿ(ಪಿಐ, ಎಸ್‌ಐಟಿ, ಲೋಕಾಯುಕ್ತ).

ಎಂ.ಎಸ್.ರಮೇಶ್(ಪಿಎಸ್‌ಐ, ಅಶೋಕನಗರ ಠಾಣೆ, ಬೆಂಗಳೂರು), ಡಿ. ಲಕ್ಷ್ಮಣ್(ಪಿಎಸ್‌ಐ, ಅರಸೀಕೆರೆ ಗ್ರಾಾಮಾಂತರ ಠಾಣೆ), ಬಿ.ಸುರೇಶ್(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಬೆಂಗಳೂರು), ಕೆ.ಶಿವಕುಮಾರ್,(ಪಿಎಸ್‌ಐ, ಆಗುಂಬೆ ಠಾಣೆ, ಶಿವಮೊಗ್ಗ).

ಅಂಜನ್ ಕುಮಾರ್(ಪಿಐ, ದೊಡ್ಡಪೇಟೆ ಠಾಣೆ, ಶಿವಮೊಗ್ಗ), ಬಿ.ಪ್ರದೀಪ್, (ಪಿಎಸ್‌ಐ, ಕಾಮಸಮುದ್ರ ಠಾಣೆ, ಕೋಲಾರ), ಟಿ. ಸಂಜೀವರಾಯಪ್ಪ( ಪಿಐ, ಬಂಗಾರಪೇಟೆ, ಕೋಲಾರ), ಬಿ.ಎಂ.ಮಂಜುನಾಥ್(ಕಾನ್‌ಸ್ಟೇಬಲ್, ಡಿಸಿಆರ್‌ಬಿ, ಚಿತ್ರದುರ್ಗ), ಡಿ. ರಾಜ(ಕಾನ್‌ಸ್ಟೇಬಲ್, ವಿರಾಜಪೇಟೆ ಗ್ರಾಾಮಾಂತರ, ಕೊಡಗು).

 ಎ.ವಿ.ಗುರುಪ್ರಸಾದ್(ಪಿಐ, ಕುಣಿಗಲ್ ಠಾಣೆ), ಎಚ್.ಮುತ್ತುರಾಜ್(ಪಿಐ, ವಿಧಾನಸೌಭ ಭದ್ರತೆ, ಬೆಂಗಳೂರು), ಕೆ.ಪಿ.ಆನಂದರಾಧ್ಯ(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಸೆಂಟ್ರಲ್), ಸುನೀಲ್ ಕುಮಾರ್ ತುಂಬದ(ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಸೆಂಟ್ರಲ್), ಎಸ್. ರೇಣುಕಯ್ಯ (ಹೆಡ್‌ಕಾನ್‌ಸ್ಟೇಬಲ್, ಸಿಎಆರ್, ಬೆಂಗಳೂರು), ಆನಂದಕುಮಾರ್ ಮೊಪಗಾರ(ಪಿಎಸ್‌ಐ, ಗೋವಿಂದಪುರ ಠಾಣೆ, ಬೆಂಗಳೂರು).

ಎಂ.ಆರ್.ಮುದವಿ(ಡಿವೈಎಸ್ಪಿ ಸಿಐಡಿ, ಬೆಂಗಳೂರು), ಎನ್.ಶ್ರೀಹರ್ಷ(ಡಿವೈಎಸ್ಪಿ, ಸಿಐಡಿ, ಬೆಂಗಳೂರು), ನಾಗನಗೌಡ ಕಟ್ಟಿಿಮನಿ ಗೌಡ್ರ(ಪಿಐ, ಸಿಇಎನ್, ಬೆಳಗಾವಿ) ಅವರಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.

Similar News