ತುಮಕೂರು ಬಿಜೆಪಿ ಉಪಾಧ್ಯಕ್ಷರಾಗಿ ಸಚಿವ ಸೋಮಣ್ಣ ಪುತ್ರ ನೇಮಕ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ, ಗೋ ಬ್ಯಾಕ್​ ಅಭಿಯಾನ

Update: 2023-03-29 11:22 GMT

ಬೆಂಗಳೂರು, ಮಾ. 29: ಪ್ರಾತಿನಿಧ್ಯ ದೊರೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ವಸತಿ ಸಚಿವ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರನ್ನು ತುಮಕೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. 

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರೋಧಿಗಳಿಗೆ ಬೆಂಬಲವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ Go Back Arun Somanna ಪೋಸ್ಟ್​ಗಳನ್ನು ಹಾಕುವ ಮೂಲಕ ಕೆಲವು ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ, ಅರುಣ್ ಸೋಮಣ್ಣ ಬಿ,ವೈ  ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ಸುರೇಶ್ ಗೌಡ್ರು ವಿಜಯೇಂದ್ರಣ್ಣ ನವರ ಪರ ಮಾತಾಡಿದ್ದಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ ಕಟೀಲ್ ಅದೇ ವಿಜಯೇಂದ್ರಣ್ಣ ನವರಿಗೆ ಏಕವಚನದಲ್ಲಿ ಮಾತನಾಡಿದ ಅರುಣ್ ಸೋಮಣ್ಣ ಅವರಿಗೆ ಪಕ್ಷದ ಉನ್ನತ ಸ್ಥಾನಮಾನ!!ಮಾನ್ಯ ಕಟೀಲ್ ಅವರೇ ನಿಮ್ಮ ಸಿದ್ಧಾಂತ ಏನು ಸ್ಪಷ್ಟನೆ ನೀಡಿ'' ಎಂದು ಆಗ್ರಹಿಸಿ ಕಾರ್ಯಕರ್ತರೊಬ್ಬರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

''ನಮ್ಮ ಜಿಲ್ಲೆಯಲ್ಲಿ ಯಾರು ಪಕ್ಷಸಂಘಟಣೆ ಮಾಡಲು ನಾಯಕರು ಇಲ್ಲ ಅಂತ ಹೊರಗಡೆ ಇಂದ ಅರುಣ್ ಸೋಮಣ್ಣ ನವರನ್ನು ಕರೆತಂದು ಸಂಘಟಣೆಗೆ ತೊಡಗಿಸಬೇಕಿತ್ತಾ ನಾಯಕರೆ ಇದೆನಾ ಪಕ್ಷದ ಸಿದ್ದಾಂತ ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯ ಕರ್ತರು ಏನಾಗಬೇಕು'' ಎಂದು ಮುನಿ ಬಸವರಾಹು ಸ್ವಾಮಿ ಎಂಬವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

Full View Full View Full View

Similar News