ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ರಂದು ಮತದಾನ, ಮೇ 13ರಂದು ಮತ ಎಣಿಕೆ

Update: 2023-03-30 08:13 GMT

ಹೊಸದಿಲ್ಲಿ:  ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು (ಬುಧವಾರ) ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. 

ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದದರು.

224 ವಿಧಾನಸಭಾ ಕ್ಷೇತ್ರಗಳಿಗೆ ಮೇ.10 ರಂದು (ಬುಧವಾರ)  ಒಂದೇ ಹಂತದ ಮತದಾನ ಹಾಗೂ ಮೇ.13ರಂದು (ಶನಿವಾರ) ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು. 

ಎಪ್ರಿಲ್ 13ರಂದು ಚುನಾವಣೆಗೆ ಅಧಿಸೂಚನೆ ಆರಂಭವಾಗಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬರಲಿದೆ.

ಚುನಾವಣಾ ವೇಳಾಪಟ್ಟಿ ಹೀಗಿದೆ...

ನಾಮಪತ್ರ ಸಲ್ಲಿಸಲು ಕೊನೆಯ ದಿನ: ಎ.20

ನಾಮಪತ್ರಗಳ ಪರಿಶೀಲನೆ: ಎ.21

ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಎ.24

ಮತದಾನ: ಮೇ.10

ಮತ ಎಣಿಕೆ: ಮೇ.13

ಇದನ್ನೂ ಓದಿಮನೆಯಿಂದಲೇ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಮತದಾನ ಮಾಡುವ ಅವಕಾಶ: ಮುಖ್ಯ ಚುನಾವಣಾ ಆಯುಕ್ತ

Similar News