ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ: ಸಿಎಂ ನಿವಾಸದಲ್ಲಿದ್ದ 2 ಸರಕಾರಿ ಕಾರುಗಳು ವಾಪಸ್

ಸರಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ ಸಿದ್ದರಾಮಯ್ಯ

Update: 2023-03-29 19:02 GMT

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸುತ್ತಿದ್ದಂತೆ, ನೀತಿ ಸಂಹಿತೆಯು ಜಾರಿಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿದ್ದ 2 ಸರಕಾರಿ ಕಾರುಗಳನ್ನು ಚುನಾವಣಾಧಿಕಾರಿಗಳು ವಾಪಸ್ ಪಡೆದುಕೊಂಡರು. 

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೈಸೂರಿನಿಂದ ವರುಣಾದಲ್ಲಿ ಇತ್ತೀಚೆಗೆ ನಿಧನರಾಗಿದ್ದ ಮಲ್ಲೇಶ್ ಎಂಬುವರ ಶ್ರದ್ಧಾಂಜಲಿ ಸಭೆಗೆ ಸರಕಾರಿ ಕಾರಿನಲ್ಲೇ ಹೋಗಿದ್ದರು. ಆದರೆ, ಶ್ರದ್ಧಾಂಜಲಿ ಸಭೆಯನ್ನು ಮುಗಿಸಿ ಹೊರಬರುವಷ್ಟರಲ್ಲಿ ನೀತಿ ಸಂಹಿತೆ ಜಾರಿಯಾಗಿತ್ತು. ಆ ಹಿನ್ನೆಲೆಯಲ್ಲಿ, ಅಧಿಕಾರಿಗಳು ಸಿದ್ದರಾಮಯ್ಯನವರ ಕಾರನ್ನು ವಶಕ್ಕೆ ಪಡೆದಿದ್ದಾರೆ. ಆನಂತರ ಸಿದ್ದರಾಮಯ್ಯನವರು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು. 

ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿದ್ದ ಸಚಿವ ಎಂಟಿಬಿ ನಾಗರಾಜು ಅವರು ಕಾರು ಹತ್ತುವ ವೇಳೆ ನೀತಿ ಸಂಹಿತಿ ಜಾರಿ ಬಗ್ಗೆ  ಸಿಬ್ಬಂದಿ ಮಾಹಿತಿ ನೀಡಿದರು. ಈ ವೇಳೆ ಸರ್ಕಾರಿ ಕಾರು ಬಿಟ್ಟು ಸಚಿವರು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ರಂದು ಮತದಾನ, ಮೇ 13ರಂದು ಮತ ಎಣಿಕೆ

Similar News