ಎಸೆಸೆಲ್ಸಿ ಪರೀಕ್ಷೆ: ಮೊದಲ ದಿನವೇ 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

Update: 2023-03-31 13:13 GMT

ಬೆಂಗಳೂರು: ಪ್ರಸಕ್ತ ವರ್ಷದ ಎಸೆಸೆಲ್ಸಿಯ ಪ್ರಥಮ ಭಾಷೆಯಾದ ಕನ್ನಡ, ಇಂಗ್ಲಿಷ್, ತೆಲುಗು, ಹಿಂದಿ, ಮರಾಠಿ, ತೆಮಿಳು, ಉರ್ದು ಮತ್ತು ಸಂಸ್ಕೃತ ಭಾಷಾ ಪರೀಕ್ಷೆ ಶುಕ್ರವಾರದಂದು ನಡೆದಿದ್ದು, ಪರೀಕ್ಷೆಗೆ ಸುಮಾರು 12,550 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 8,27,276 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, 8,14,726 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. 

ಕಲಬುರಗಿ ಜಿಲ್ಲೆಯಲ್ಲಿ 1,998 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಬೆಂಗಳೂರು ಜಿಲ್ಲೆಯಲ್ಲಿ 1,102 ವಿದ್ಯಾರ್ಥಿಗಳು, ವಿಜಯಪುರ ಜಿಲ್ಲೆಯಲ್ಲಿ 832, ಯಾದಗಿರಿ ಜಿಲ್ಲೆಯಲ್ಲಿ 623 ವಿದ್ಯಾರ್ಥಿಗಳು, ರಾಯಚೂರು ಜಿಲ್ಲೆಯಲ್ಲಿ 539 ವಿದ್ಯಾರ್ಥಿಗಳು ಗೈರಾಗಿದ್ದಾರೆ. 

Similar News