ಬೆಂಗಳೂರು- ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ: ಆದೇಶ ಹಿಂಪಡೆದ ಪ್ರಾಧಿಕಾರ

Update: 2023-04-01 06:03 GMT

ಬೆಂಗಳೂರು,ಎ.1: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನ ಟೋಲ್ ದರ ಹೆಚ್ಚಳ ಮಾಡಿದ್ದ ಆದೇಶವನ್ನು ಮುಂದೂಡಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಿಳಿಸಿದೆ.

ಇಂದಿನಿಂದ (ಎಪ್ರಿಲ್ 1) ಹೆದ್ದಾರಿ ಟೋಲ್ ದರವನ್ನು ಶೇ. 22 ರಷ್ಟು ಹೆಚ್ಚಳ ಮಾಡಿ ಪ್ರಾಧಿಕಾರವು ಆದೇಶ ಹೊರಡಿಸಿತ್ತು. 

ಮಾ. 14ರಿಂದ ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭವಾಗಿದ್ದು, 15 ದಿನದಲ್ಲೇ ಟೋಲ್ ದರ ಏರಿಸಿದ್ದರು. ಟೋಲ್ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Similar News