ನೀತಿ‌ಸಂಹಿತೆ ಉಲ್ಲಂಘನೆ ಆರೋಪ: ಜನಾರ್ದನ ರೆಡ್ಡಿ ಪಕ್ಷದ ಪೋಸ್ಟರ್ ಇದ್ದ ಆಂಬ್ಯುಲೆನ್ಸ್ ವಶಕ್ಕೆ

Update: 2023-04-01 17:23 GMT

ಕೊಪ್ಪಳ: ಚುನಾವಣಾ ಮಾದರಿ ನೀತಿ‌ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ವತಿಯಿಂದ ಸಾರ್ವಜನಿಕರ ಬಳಕೆಗೆ ನೀಡಲಾಗಿದ್ದ ಆಂಬ್ಯುಲೆನ್ಸ್ ಅನ್ನು ಅಧಿಕಾರಿಗಳು ಶನಿವಾರ ರಾತ್ರಿ ಕನಕಗಿರಿ ಪಟ್ಟಣದಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ವಶಪಡಿಸಿಕೊಂಡಿದ್ದಾರೆ.

ಆಂಬ್ಯುಲೆನ್ಸ್ ಮೇಲೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನರೆಡ್ಡಿ, ಪತ್ನಿ ಮತ್ತು ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಡಾ.‌ವೆಂಕಟರಮಣ ಫೋಟೋ ಹಾಕಲಾಗಿತ್ತು. ಉಚಿತ ಸೇವೆಯ ಹೆಸರಿನಲ್ಲಿ ಈ ಆಂಬ್ಯುಲೆನ್ಸ್ ವಿವಿಧ ಗ್ರಾಮಗಳಲ್ಲಿ ಸಂಚರಿಸುತ್ತಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆಂಬ್ಯುಲೆನ್ಸ್ ಜಪ್ತಿ ಮಾಡಿ ಕನಕಗಿರಿ ಪೊಲೀಸ್ ಠಾಣಾ ಆವರಣದಲ್ಲಿ ನಿಲ್ಲಿಸಲಾಗಿದ್ದು, ಪ್ರಕರಣ ದಾಖಲಿಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ. 

ಇದನ್ನೂ ಓದಿ: ಬಿಟಿಎಂ ಲೇಔಟ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಶೆಟ್ಟಿ ಮನೆಯಲ್ಲಿ 504 ಕುಕ್ಕರ್ ಜಪ್ತಿ: ಪ್ರಕರಣ ದಾಖಲು 

Similar News