ಚಳ್ಳಕೆರೆ ಬಿಳಿ ರಸ್ತೆ ಅಪಘಾತ: ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತ್ಯು

Update: 2023-04-02 12:08 GMT

ಚಿತ್ರದುರ್ಗ: ಹಿರೇಹಳ್ಳಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಬಳ್ಳಾರಿ ಮೂಲದ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮೃತಪಟ್ಟಿರುವ ಘಟನೆ ರವಿವಾರ ವರದಿಯಾಗಿದೆ. 

ವೀರಣ್ಣ ಅವರು ಪುತ್ರ ಹನುಮಂತ ಅವರೊಂದಿಗೆ ಬೆಳಗ್ಗೆ ಬೆಂಗಳೂರಿಗೆ ಹೊರಟಾಗ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಬಳಿ ಕಾರು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಕಾರಲ್ಲಿದ್ದ ವೀರಣ್ಣ ಅವರ ಪುತ್ರ ಹನುಮಂತಪ್ಪ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವೀರಣ್ಣ ಅವರನ್ನು ಚಳ್ಳಕೆರೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೀರಣ್ಣ ಅವರು 'ತೊಗಲು ಗೊಂಬೆ ಆಟ' ಕಲೆಯ ಮೂಲಕ ತಮ್ಮದೆ ಛಾಪು ಮೂಡಿಸಿದ್ದರು. ಅವರು ಹಂಪಿ ಕನ್ನಡ ವಿವಿಯ ನಾಡೋಜ, ಕರ್ನಾಟಕ ರಾಜ್ಯೋತ್ಸವ‌, ಜಾನಪದ ಅಕಾಡೆಮಿ ಮತ್ತಿತರ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.

ಇದನ್ನೂ ಓದಿ: ನೀತಿ‌ಸಂಹಿತೆ ಉಲ್ಲಂಘನೆ ಆರೋಪ: ಜನಾರ್ದನ ರೆಡ್ಡಿ ಪಕ್ಷದ ಪೋಸ್ಟರ್ ಇದ್ದ ಆಂಬ್ಯುಲೆನ್ಸ್ ವಶಕ್ಕೆ

Similar News