ಚಿತ್ರದುರ್ಗ: ಚಿನೂಕ್ ಹೆಲಿಕಾಪ್ಟರ್ ಬಳಸಿ ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಇಸ್ರೊ

Update: 2023-04-02 07:41 GMT

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೊ)  ತನ್ನ ಅಭಿವೃದ್ಧಿ ಹಂತದಲ್ಲಿರುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (ಆರ್‌ಎಲ್‌ವಿ-ಎಲ್ ಇ ಎಕ್ಸ್ ) ಲ್ಯಾಂಡಿಂಗ್ ಪರೀಕ್ಷೆಯನ್ನು ಕರ್ನಾಟಕದ ಚಿತ್ರದುರ್ಗದಲ್ಲಿ ರವಿವಾರ ಯಶಸ್ವಿಯಾಗಿ ನಡೆಸಿತು.

ಈ ಪರೀಕ್ಷೆಯನ್ನು ರವಿವಾರ ಮುಂಜಾನೆ ಚಿತ್ರದುರ್ಗದಲ್ಲಿರುವ ರಕ್ಷಣಾ ಇಲಾಖೆಯ ಏರೋನಾಟಿಕಲ್ ಪರೀಕ್ಷಾ ವಲಯದಲ್ಲಿ ಸ್ಥಾಪಿಸಿದ್ದ ಪ್ರಥಮ ರನ್ ವೇನಲ್ಲಿ ನಡೆಸಲಾಯಿತು.

ಪರೀಕ್ಷೆಯ ವೇಳೆ ಪುನರ್ ಬಳಕೆಯ ಉಡಾವಣಾ ವಾಹನದ ಕವಚವನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್  ಮೂಲಕ ಮೇಲ್ಮೈಯಿಂದ 4.5 ಕಿಲೋಮೀಟರ್ ಎತ್ತರದಿಂದ ರನ್ ವೇಗೆ ಇಳಿ ಬಿಡಲಾಯಿತು. ಹೀಗೆ ಇಳಿ ಬಿಟ್ಟ ಕವಚವು ರನ್ ವೇಯಲ್ಲಿ  ಜಾರಿಕೊಂಡು ಚಲಿಸಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

Similar News