ಈ ಬಾರಿ ರಾಜ್ಯದಿಂದ ಹಜ್‌ ಯಾತ್ರೆಗೆ ಆಯ್ಕೆಯಾದವರು ಗಮನಿಸಬೇಕಾದ ಪ್ರಮುಖ ಅಂಶಗಳು

Update: 2023-04-02 10:05 GMT

ಬೆಂಗಳೂರು: ಈ ಸಾಲಿನ ಹಜ್‌ (Haj) ಯಾತ್ರೆಗೆ ಹಜ್ ಸಮಿತಿ ಮೂಲಕ ಪ್ರಯಾಣಿಸಲು ರಾಜ್ಯದಿಂದ ಐದು ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದು, ಒಟ್ಟು ಎಂಟು ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಮುಖವಾದ ಅಂಶವನ್ನು ಸುತ್ತೋಲೆಯಲ್ಲಿ ನಮೂದಿಸಿದ್ದನ್ನು ಆಯ್ಕೆಯಾದವರು ಗಮನಿಸಬೇಕಾಗಿದೆ. 

ಹಜ್‌ ಯಾತ್ರೆಗಿರುವ ಮುಂಗಡ (ಅಡ್ವಾನ್ಸ್‌) ಪಾವತಿಗೆ ಈ ಬಾರಿ ಹೆಚ್ಚಿನ ಸಮಯವನ್ನು ನಿಗದಿಪಡಿಸಲಾಗಿಲ್ಲ. ಹಜ್‌ ನ ಮುಂಗಡ ಹಣ ಪಾವತಿ ಮಾಡಲು ಎಪ್ರಿಲ್‌ 7 ಕೊನೆಯ ದಿನವಾಗಿರುತ್ತದೆ.

ಅಡ್ವಾನ್ಸ್‌ ಜೊತೆಗೆ ಕರ್ನಾಟಕ ರಾಜ್ಯ ಹಜ್‌ ಸಮಿತಿಗೆ ಪಾಸ್‌ಪೋರ್ಟ್, ಪಾಸ್‌ಪೋರ್ಟ್‌ ಝೆರಾಕ್ಸ್‌, ಬಿಳಿ ಹಿನ್ನೆಲೆಯಿರುವ ಎರಡು ಪಾಸ್‌ಪೋರ್ಟ್‌ ಸೈಝ್‌ ಫೋಟೊಗಳು, ಒರಿಜಿನಲ್‌ ಪೇ ಸ್ಲಿಪ್‌, ಕೋವಿಡ್‌ ವ್ಯಾಕ್ಸಿನ್‌ ಪಡೆದುಕೊಂಡ ಸರ್ಟಿಫಿಕೇಟ್‌ ಹಾಗೂ ರದ್ದುಗೊಳೊಸಲಾದ ಬ್ಯಾಂಕ್ ಚೆಕ್ ಮತ್ತು ಬ್ಯಾಂಕ್ ವಿವರಗಳ ಪುರಾವೆಯನ್ನು ನೀಡಬೇಕಾಗಿತ್ತದೆ.

ಭಾರತೀಯ ಹಜ್ ಸಮಿತಿಯು ಮಾ.31ರಂದು ರಾತ್ರಿ ದೇಶದಾದ್ಯಂತ ಏಕಕಾಲಕ್ಕೆ ಆನ್‍ಲೈನ್ ಖುರ್ರಾ (ಲಾಟರಿ) ಮೂಲಕ ಯಾತ್ರಿಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ರಾಜ್ಯದ 5 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ.

Similar News