×
Ad

ಕೊಪ್ಪ: ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಕಚೇರಿಯಲ್ಲಿ ಕಳ್ಳತನ

Update: 2023-04-03 14:05 IST

ಚಿಕ್ಕಮಗಳೂರು, ಮಾ.3: ವಿಧಾನಸಭಾ ಚುನಾವಣೆಗೆ ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಸುಧಾಕರ್ ಶೆಟ್ಟಿಯವರ ಕೊಪ್ಪ ಪಟ್ಟಣದಲ್ಲಿರುವ ಚುನಾವನಾ ಕಚೇರಿಯಿಂದ ಕಳ್ಳತನ ನಡೆದಿರುವುದು ವರದಿಯಾಗಿದೆ.

ಸುಧಾಕರ್ ಶೆಟ್ಟಿಯವರು ಚುನಾವಣೆಯ ಹಿನ್ನೆಲೆಯಲ್ಲಿ ಕೊಪ್ಪ ಪಟ್ಟಣದ ಮುಖ್ಯರಸ್ತೆ ಪಕ್ಕದಲ್ಲಿ ಕಚೇರಿ ತೆರೆದಿದ್ದಾರೆ. ಈ ಕಚೇರಿಯ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಇಡೀ ಕಚೇರಿಯನ್ನು ಜಾಲಾಡಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಕ್ಷೇತ್ರದ ಮಹತ್ವದ ದಾಖಲೆಗಳನ್ನು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಕೊಪ್ಪ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

Similar News