×
Ad

ಗೋವಿಗಾಗಿ ಜೈಲಲ್ಲೂ ಇರ್ತೀನಿ, ಮೇಲೂ ಇರ್ತೀನಿ: ಪುನೀತ್ ಕೆರೆಹಳ್ಳಿ ವೀಡಿಯೊ ವೈರಲ್

ಬಂಧನ ವದಂತಿ ನಡುವೆಯೇ ಕೊಲೆ ಆರೋಪಿಯಿಂದ ಅವಹೇಳನಕಾರಿ ವೀಡಿಯೊ

Update: 2023-04-04 00:14 IST

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ ಶುಕ್ರವಾರ ಮಧ್ಯ ರಾತ್ರಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ವಾಹನದ ಚಾಲಕನನ್ನು ಥಳಿಸಿ ಹತ್ಯೆಗೈದಿರುವ ಗಂಭೀರ ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಆತನ ಬಂಧನದ  ವದಂತಿ ನಡುವೆಯೇ ಕಾರೊಂದರಲ್ಲಿ ಕುಳಿತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್. ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ವಿಡಿಯೋ ಹರಿಯಬಿಟ್ಟಿರುವುದು ಬೆಳಕಿಗೆ ಬಂದಿದೆ. 

ಅಲ್ಲದೇ, 'ಗೋವಿಗಾಗಿ ಜೈಲಲ್ಲೂ ಇರ್ತೀನಿ, ಮೇಲೂ ಇರ್ತೀನಿ. ಆದರೆ ನೀವು ಇಡೀ ಕುಟುಂಬ ಗೋವಿನ ಶಾಪಕ್ಕೆ ತುತ್ತಾಗದೇ ಇದ್ದರೆ ನನ್ನ ಹೆಸರು ಪುನೀತ್ ಕೆರೆಹಳ್ಳಿನೇ ಅಲ್ಲ' ಎಂದು ಸವಾಲು ಹಾಕಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿಕನಕಪುರ | ಪುನೀತ್‌ಕೆರೆಹಳ್ಳಿ ತಂಡದಿಂದ ವಾಹನ ತಡೆದು ದಾಳಿ: ಓರ್ವನ ಅನುಮಾನಾಸ್ಪದ ಸಾವು

Full View Full View

Similar News