ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
ಮುಂದುವರಿದ ದ. ಕ ಜಿಲ್ಲೆಯ ಮೂರು ಕ್ಷೇತ್ರಗಳ ಸಸ್ಪೆನ್ಸ್
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗುರುವಾರ 42 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದೆ.
ಆದರೆ, ಟಿಕೆಟ್ ಆಕಾಂಕ್ಷಿಗಳ ತೀವ್ರ ಹಣಾಹಣಿ ಇರುವ ದ.ಕ ಜಿಲ್ಲೆಯ ಮಂಗಳೂರು ಉತ್ತರ , ಮಂಗಳೂರು ದಕ್ಷಿಣ ಹಾಗು ಪುತ್ತೂರು ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.
ಇನ್ನು ಶಿಗ್ಗಾವ್ ನಲ್ಲಿ ಬಸವರಾಜ ಬೊಮ್ಮಾಯಿ ಎದುರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಧಾರಾವಾಡದಿಂದಲೇ ಕಣಕ್ಕಿಳಿಸಲಾಗಿದೆ.
ಮಂಡ್ಯದ ಮೇಲುಕೋಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಹಾಕದೆ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕಾಂಗ್ರೆಸ್ ಬೆಂಬಲಿಸಲಿದೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ...
ನಿಪ್ಪಾಣಿ-ಕಾಕಾಸಾಹೇಬ್ ಪಾಟೀಲ್
ಗೋಕಾಕ್-ಮಹಾಂತೇಶ್ ಕಡಾಡಿ
ಕಿತ್ತೂರು-ಬಾಬಾಸಾಹೇಬ್ ಡಿ.ಪಾಟೀಲ್
ಸವದತ್ತಿ ಯಲ್ಲಮ್ಮ-ವಿಶ್ವಾಸ್ ವಸಂತ ವೈದ್ಯ
ಮುಧೋಳ-(ಎಸ್‍ಸಿ) ಆರ್.ಬಿ.ತಿಮ್ಮಾಪುರ್
ಬೀಳಗಿ-ಜಿ.ಟಿ.ಪಾಟೀಲ್
ಬಾದಾಮಿ-ಭೀಮಸೇನ್ ಬಿ.ಚಿಮ್ಮನಕಟ್ಟಿ
ಬಾಗಲಕೋಟೆ-ಹುಲ್ಲಪ್ಪ ವೈ.ಮೇಟಿ
ಬಿಜಾಪುರ ನಗರ-ಅಬ್ದುಲ್ ಹಮೀದ್
ನಾಗಾಠಾಣಾ(ಎಸ್‍ಸಿ)-ವಿಠಲ್ ಕಟಕದೊಂಡ
ಅಫ್ಜಲ್‍ಪುರ-ಎಂ.ವೈ.ಪಾಟೀಲ್
ಯಾದಗಿರಿ-ಚನ್ನರೆಡ್ಡಿ ಪಾಟೀಲ್ ತುನ್ನೂರ್
ಗುರಮಿರ್‍ಕಲ್-ಬಾಬುರಾವ್ ಚಿಂಚನಸೂರ
ಗುಲ್ಬರ್ಗ ದಕ್ಷಿಣ-ಅಲ್ಲಮಪ್ರಭು ಪಾಟೀಲ್
ಬಸವಕಲ್ಯಾಣ-ವಿಜಯ್ ಧರಮ್ ಸಿಂಗ್
ಗಂಗಾವತಿ-ಇಕ್ಬಾಲ್ ಅನ್ಸಾರಿ
ನರಗುಂದ-ಬಿ.ಆರ್.ಯಾವಗಲ್
ಧಾರವಾಡ-ವಿನಯ್ ಕುಲಕರ್ಣಿ
ಕಲಘಟಗಿ-ಸಂತೋಷ್ ಎಸ್. ಲಾಡ್
ಶಿರಸಿ-ಭೀಮಣ್ಣ ನಾಯ್ಕ್
ಯಲ್ಲಾಪುರ-ವಿ.ಎಸ್.ಪಾಟೀಲ್
ಕೂಡ್ಲಗಿ(ಎಸ್‍ಟಿ)-ಡಾ.ಶ್ರೀನಿವಾಸ್ ಎನ್.ಟಿ.
ಮೊಳಕಾಲ್ಮೂರು(ಎಸ್‍ಟಿ)-ಎನ್.ವೈ.ಗೋಪಾಲಕೃಷ್ಣ
ಚಿತ್ರದುರ್ಗ-ಕೆ.ಸಿ.ವೀರೇಂದ್ರ
ಹೊಳಲ್ಕೆರೆ (ಎಸ್‍ಸಿ)-ಆಂಜನೇಯ ಎಚ್.
ಚನ್ನಗಿರಿ-ಬಸವರಾಜು ವಿ.ಶಿವಗಂಗ
ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ್
ಉಡುಪಿ-ಪ್ರಸಾದ್ ರಾಜ್ ಕಾಂಚನ್
ಕಡೂರು-ಆನಂದ್ ಕೆ.ಎಸ್.
ತುಮಕೂರು ನಗರ-ಇಕ್ಬಾಲ್ ಅಹ್ಮದ್
ಗುಬ್ಬಿ-ಎಸ್.ಆರ್.ಶ್ರೀನಿವಾಸ್
ಯಲಹಂಕ-ಕೇಶವ ರಾಜಣ್ಣ ಬಿ.
ಯಶವಂತಪುರ-ಬಾಲರಾಜ್ ಗೌಡ
ಮಹಾಲಕ್ಷ್ಮಿ ಲೇಔಟ್-ಕೇಶವಮೂರ್ತಿ
ಪದ್ಮನಾಭನಗರ-ರಘುನಾಥ್ ನಾಯ್ಡು
ಮೇಲುಕೋಟೆ-ದರ್ಶನ್ ಪುಟ್ಟಣ್ಣಯ್ಯ(ಬೆಂಬಲ)
ಮಂಡ್ಯ-ಪಿ.ರವಿಕುಮಾರ್
ಕೃಷ್ಣರಾಜಪೇಟೆ-ಬಿ.ಎಲ್.ದೇವರಾಜ್
ಬೇಲೂರು-ಬಿ.ಶಿವರಾಮ್
ಮಡಿಕೇರಿ-ಡಾ.ಮಂಥರ್ ಗೌಡ
ಚಾಮುಂಡೇಶ್ವರಿ-ಸಿದ್ದೇಗೌಡ
ಕೊಳ್ಳೇಗಾಲ(ಎಸ್‍ಸಿ)-ಎ.ಆರ್.ಕೃಷ್ಣಮೂರ್ತಿ