ಸುದೀಪ್ ನನ್ನ ಪರವಾಗಿಯೂ ಪ್ರಚಾರ ಮಾಡಲಿದ್ದಾರೆ ಎಂದ ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ
Update: 2023-04-06 15:09 IST
ತುಮಕೂರು: 'ಮುಂಬರಲಿರುವ ವಿಧಾನಸಭೆ ಚುನಾವಣೆಗೆ ನಟ ಸುದೀಪ್ ಅವರು ನನ್ನ ಪರವಾಗಿಯೂ ಪ್ರಚಾರ ಮಾಡಲಿದ್ದಾರೆ' ಎಂದು ಮಾಜಿ ಸಚಿವ, ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ ಪ್ರಕಟಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು. ಅವರು ಬೊಮ್ಮಾಯಿ ಅವರಿಗೆ ಬೇಕಾದರೆ ಮಾಡಲಿ ಸಂತೋಷ. ನಾನೂ ಕೂಡ ಪ್ರಚಾರಕ್ಕೆ ಕರೆಸುತ್ತೇನೆ. ಅವರು ಬರುತ್ತಾರೆ ಎಂಬ ವಿಶ್ವಾಸವಿದೆ' ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಿಂದ ಈಗಾಗಲೇ ಕೆ.ಎನ್ ರಾಜಣ್ಣ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.