×
Ad

ಕಾಂಗ್ರೆಸ್ ನ ಒಟ್ಟು 166 ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರಿಗೆಷ್ಟು ಸ್ಥಾನ?

ಅಚ್ಚರಿ ಮೂಡಿಸಿದ 2ನೇ ಪಟ್ಟಿ!

Update: 2023-04-06 18:07 IST

ಬೆಂಗಳೂರು:  ಚುನಾವಣೆ ದಿನಾಂಕ ಘೋಷಣೆಗೂ ಮುನ್ನ 124 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗುರುವಾರ 42 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದೆ.  ಒಟ್ಟು 166 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.

ಸದ್ಯ ಈ ವರೆಗೆ ಪ್ರಕಟವಾದ 166ರಲ್ಲಿ 6 ಮಂದಿ  ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದು, ಇನ್ನು ಕೇವಲ 58 ಕ್ಷೇತ್ರಗಳು ಮಾತ್ರ ಬಾಕಿಯಿವೆ. ಅಚ್ಚರಿ ಸಂಗತಿಯೇನಂದರೆ ಗುರುವಾರ ಬಿಡುಗಡೆಯಾದ 2ನೇ ಪಟ್ಟಿಯಲ್ಲಿ ಒಬ್ಬರೇ ಒಬ್ಬ ಮಹಿಳಾ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ. 

ಇನ್ನು ಈ ಬಾರಿ ಒಟ್ಟು 109 ಮಂದಿ ಮಹಿಳೆಯರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕನಿಷ್ಠ 30 ಮಂದಿ ಮಹಿಳೆಯರಿಗೆ ಟಿಕೆಟ್ ಕೊಡಲೇಬೇಕು ಎಂದು ಪಕ್ಷದ ವರಿಷ್ಠರಿಗೆ ಮಹಿಳಾ ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು.

ಮೊದಲ ಪಟ್ಟಿಯಲ್ಲಿ ಕೇವಲ 6 ಮಂದಿಯ ಹೆಸರು.. ಯಾರ್ಯಾರು?

1.ಬೆಳಗಾವಿ ಗ್ರಾಮಾಂತರ- ಲಕ್ಷ್ಮಿ ಹೆಬ್ಬಾಳ್ಕರ್

2.ಖಾನಾಪುರ- ಡಾ.ಅಂಜಲಿ ನಿಂಬಾಳ್ಕರ್

3.ಗುಲ್ಬರ್ಗಾ ಉತ್ತರ- ಖನೀಝ್ ಫಾತಿಮಾ

4.ಕೋಲಾರ ಕೆಜಿಎಫ್(ಎಸ್‍ಸಿ)- ರೂಪಕಲಾ ಎಂ.ಶಶಿಧರ್

5.ಜಯನಗರ- ಸೌಮ್ಯಾ ರೆಡ್ಡಿ

6.ರಾಜರಾಜೇಶ್ವರಿನಗರ- ಕುಸುಮ ಎಚ್.

Similar News