×
Ad

ಸುದೀಪ್‌ ಚಿತ್ರ, ಜಾಹಿರಾತುಗಳಿಗೆ ನಿರ್ಬಂಧ ವಿಧಿಸಿ: ಜೆಡಿಎಸ್‌ ಮನವಿ

Update: 2023-04-07 14:22 IST

ಬೆಂಗಳೂರು: ನಟ ಸುದೀಪ್‌ ಅವರು ಬಿಜೆಪಿಯ ಸ್ಟಾರ್‌ ಪ್ರಚಾರಕರಾಗಿರುವುದರಿಂದ ಅವರು ನಟಿಸಿರುವ ಸಿನೆಮಾ, ಜಾಹಿರಾತುಗಳ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಜೆಡಿಎಸ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಚುನಾವಣೆ ಮುಗಿಯುವವರೆಗೆ ನಟ ಸುದೀಪ್‌ ಅವರ ಪೋಸ್ಟರ್‌, ಜಾಹಿರಾತು, ಚಿತ್ರ, ಕಾರ್ಯಕ್ರಮಗಳನ್ನು ಟಿವಿ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದೆಂದು ಜೆಡಿಎಸ್‌ ರಾಜ್ಯ ವಕ್ತಾರ ಪ್ರದೀಪ್‌ ಕುಮಾರ್‌ ಅವರು ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದಾರೆ.

Similar News