ಕೊಡೋ ಜಾಗದಲ್ಲಿ ಇಟ್ಟಿದ್ವಿ, ಬೇಡೋ ಜಾಗಕ್ಕೆ ಹೋಗಿದ್ದಾರೆ: ವೈ.ಎಸ್.ವಿ ದತ್ತ ವಿರುದ್ಧ ಸಿ.ಎಂ ಇಬ್ರಾಹಿಂ ವ್ಯಂಗ್ಯ
Update: 2023-04-07 15:21 IST
ಚಿಕ್ಕಮಗಳೂರು,ಎ.7: ನಾವು ಅವರನ್ನು ಕೊಡೋ ಜಾಗದಲ್ಲಿ ಇಟ್ಟಿದ್ವಿ, ಆದರೆ ಅವರು ಬೇಡೋ ಜಾಗಕ್ಕೆ ಹೋಗಿದ್ದಾರೆ ಎಂದು ವೈ.ಎಸ್.ವಿ.ದತ್ತ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಂಗ್ಯ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು ಕಡೂರಿನಲ್ಲಿ ಒಬ್ಬರು ಪುಣ್ಯಾತ್ಮರು ಇದ್ದರು. ನಾವು ಅವರನ್ನು ಕೊಡೋ ಜಾಗದಲ್ಲಿ ಇಟ್ಟಿದ್ವಿ, ಬೇಡೋ ಜಾಗಕ್ಕೆ ಹೋಗಿದ್ದಾರೆ. ಕಾರ್ಯಕರ್ತರೇ, ಇದು ನಿಮ್ಮ ಮನೆ, ನೀವೆಲ್ಲಾ ವಾಪಸ್ ಬನ್ನಿ, ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, 2013ರಲ್ಲಿ ಕಡೂರಿನ ಜನ ಅಚ್ಚರಿ ಫಲಿತಾಂಶವನ್ನು ನೀಡಿದ್ದರು. ನಾನು ಆ ಹೆಸರನ್ನೇಳಲು ಸಿದ್ದನಿಲ್ಲ, ಅದರ ಅಗತ್ಯವೂ ನನಗಿಲ್ಲ. ಅವರ ಹೆಸರನ್ನು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ ಎಂದು ಪರೋಕ್ಷವಾಗಿ ವೈ.ಎಸ್.ವಿ. ದತ್ತ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.