×
Ad

ರೌಡಿ ಶೀಟ್ ನಲ್ಲಿ ಫೈಟರ್ ರವಿ ಹೆಸರು ಮುಂದುವರಿಕೆಗೆ ಹೈಕೋರ್ಟ್ ತಡೆ

Update: 2023-04-08 09:42 IST

ಬೆಂಗಳೂರು: ರೌಡಿ ಶೀಟ್ ನಲ್ಲಿ ಫೈಟರ್ ರವಿ ಹೆಸರು ಮುಂದುವರಿಸುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಫೈಟರ್ ರವಿ ಅಲಿಯಾಸ್ ಬಿ ಎಂ ಮಲ್ಲಿಕಾರ್ಜುನ ಅವರು ರೌಡಿ ಶೀಟ್ ನಿಂದ ತಮ್ಮ ಹೆಸರು ತೆಗೆದು ಹಾಕುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿದ್ದ ಪೊಲೀಸ್ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಮಲ್ಲಿಕಾರ್ಜುನ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.  

ಈ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಮೇಲಿನಂತೆ ಆದೇಶ ಮಾಡಿದೆ.

ಈ ಹಿಂದೆ ನನ್ನ ವಿರುದ್ಧ ದಾಖಲಾಗಿದ್ದ 6 ಅಪರಾಧ ಪ್ರಕರಣಗಳನ್ನೂ ಹೈಕೋರ್ಟ್ ರದ್ದುಪಡಿಸಿದೆ. ಸದ್ಯ ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೀಗಿದ್ದರೂ ರೌಡಿ ಶೀಟ್‌ನಲ್ಲಿ ಹೆಸರು ಮುಂದುವರಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಆಕ್ಷೇಪಿಸಿದ್ದರು.

ಕಳೆದ ತಿಂಗಳು (ಮಾರ್ಚ್ 12)  ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಫೈಟರ್‌ ರವಿ ಎದುರು ಕೈಮುಗಿದು ನಿಂತಿರುವ ಚಿತ್ರವೊಂದು ವೈರಲ್ ಆಗಿತ್ತು. ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. 

ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕನ ಬಂಧನ

Similar News