ಹುಲಿ ಯೋಜನೆಯ 50ನೇ ವರ್ಷಾಚರಣೆ: ಬಂಡೀಪುರದಲ್ಲಿ ಸಫಾರಿ ಆರಂಭಿಸಿದ ಪ್ರಧಾನಿ ಮೋದಿ
Update: 2023-04-09 09:10 IST
ಚಾಮರಾಜನಗರ, ಎ.9: ಹುಲಿ ಯೋಜನೆಯ 50ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ರಾಷ್ಟ್ರೀಯ ಉದ್ಯಾನವನ ತಲುಪಿದ್ದಾರೆ.
ಮೈಸೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಬೆಳಗ್ಗೆ 7:20ರ ಸುಮಾರಿಗೆ ಮೇಲುಕಾಮನಹಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ, ಭಾರಿ ಭದ್ರತೆಯೊಂದಿಗೆ ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ಬಂಡೀಪುರಕ್ಕೆ ತೆರಳಿದರು. ಅಲ್ಲಿಂದ ಸಫಾರಿ ಆರಂಭಿಸಿದರು.
ಈ ವೇಳೆ ಪ್ರಧಾನಿ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ ಮಾಡಲಿದ್ದಾರೆ. ಹಾಗೇ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ನಂತರ ಬಂಡೀಪುರ ಕ್ಯಾಂಪಸ್ನಿಂದ ಸುಮಾರು 2 ತಾಸು ಅರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ.