×
Ad

ಮೋದಿ ಕಣ್ಣಿಗೆ ಬೀಳದ ಹುಲಿ: ಹಿಡಿದು ಮಾರಿಬಿಡುತ್ತಾರೆ ಅನ್ನೋ ಭಯಕ್ಕೆ ಗುಹೆಯೊಳಗೆ ಅಡಗಿ ಕುಳಿತಿದೆ ಎಂದ ಸಿದ್ದರಾಮಯ್ಯ

ಬಂಡೀಪುರ ಅರಣ್ಯದಲ್ಲಿ ಪ್ರಧಾನಿ ಸಫಾರಿ

Update: 2023-04-09 13:34 IST

ಚಾಮರಾಜನಗರ, ಎ.9: ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಆಗಮಿಸಿರುವ ಪ್ರಧಾನಿ‌ ನರೇಂದ್ರ ಮೋದಿ ಅವರು ಬಂಡೀಪುರ ಹುಲಿ‌ ಸಂರಕ್ಷಿತ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಫಾರಿ ನಡೆಸಿದ ಈ ವೇಳೆ ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಪ್ರಧಾನಿ ಕಣ್ಣಿಗೆ ಬಿದ್ದವು. ಆದರೆ ಎಲ್ಲೂ ಹುಲಿ ಕಾಣಿಸಲಿಲ್ಲ ಎಂದು ವರದಿಯಾಗಿದೆ.

ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ,  ''ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ.. ಅಯ್ಯೋ ಪಾಪ....!'' ಎಂದು ವ್ಯಂಗ್ಯವಾಡಿದ್ದಾರೆ. 

''ಇನ್ನು ಕೆಲವೇ ದಿನಗಳಲ್ಲಿ #SaveBandipur ( ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ.. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೇಂದ್ರ ಮೋದಿ ಅವರೇ'' ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

Similar News