×
Ad

ಡಿಕೆಶಿ, ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ

Update: 2023-04-09 20:15 IST

ಹಾಸನ: ಅರಸೀಕೆರೆಯ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ರವಿವಾರ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರಿದರು.

ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡಿ ಕೆ ಶಿವಕುಮಾರ್,  'ಮಾಜಿ ಶಾಸಕ ಶಾಸಕ ಕೆ ಎಂ ಶಿವಲಿಂಗೇಗೌಡರಿಗೆ ಕಳೆದ ಹತ್ತು ವರ್ಷಗಳ ಕಾಲ ಗಾಳ ಹಾಕಿದ್ದೆ , ಆದರೆ ಸಿಗಲಿಲ್ಲ, ಸಿದ್ದರಾಮಯ್ಯರವರ ಗಾಳಕ್ಕೂ ಸಿಗಲಿಲ್ಲ ಆದರೆ ಸ್ಥಳಿಯ ಜನರ ಅಭಿವೃದ್ಧಿಯ ಗಾಳಕ್ಕೆ ಸಿಕ್ಕಿ ಬಿಟ್ಟರು' ಎಂದು ಹೇಳಿದರು.

'ಹೋರಾಟ ಮಾಡುವವನು ಗೆದ್ದೇ ಲ್ಲುತ್ತಾನೆ. ದೇವರು ವರ ಅಥಾವ ಶಾಪ ನೀಡುವುದಿಲ್ಲ ಅವಕಾಶ ಮಾತ್ರ ನೀಡುತ್ತಾನೆ ಅವಕಾಶ ವನ್ನು ಬಳಸಿಕೊಳ್ಳಲು ಮುಂದಾಗ ಬೇಕು' ಎಂದರು.

'ಕಾಂಗ್ರೆಸ್ ಸಿದ್ಧಾಂತ ಬಡವರ ಪರವಾಗಿದೆ, ಮನುಷ್ಯನಿಗೆ ನಂಬಿಕೆ ಮುಖ್ಯ, ನಂಬಿಕೆ ಇಲ್ಲದಿದ್ದರೆ  ಮನುಷ್ಯ ಬದುಕಲಾರ, ಸ್ವಾಭಿಮಾನದ ಮೇಲೆ ನಂಬಿಕೆ ಇಟ್ಟು ಇಂದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ' ಎಂದರು.

ಈ ಸಂದರ್ಭದಲ್ಲಿ ಸಂಸದ ಡಿ.ಕೆ ಸುರೇಶ್, ಮಾಜಿ ಸಚಿವರಾದ ಝಮೀರ್ ಅಹ್ಮದ್, ಡಾ.ಜಿ ಪರಮೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. 

ಇದನ್ನೂ ಓದಿ: ಮೋದಿ ಕಣ್ಣಿಗೆ ಬೀಳದ ಹುಲಿ: ಹಿಡಿದು ಮಾರಿಬಿಡುತ್ತಾರೆ ಅನ್ನೋ ಭಯಕ್ಕೆ ಗುಹೆಯೊಳಗೆ ಅಡಗಿ ಕುಳಿತಿದೆ ಎಂದ ಸಿದ್ದರಾಮಯ್ಯ

Similar News