ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ರೇವಣ್ಣರನ್ನು ಮನವೊಲಿಸುವ ಶಕ್ತಿ ದೇವೇಗೌಡರಿಗೂ ಇಲ್ಲ: ಕುಮಾರಸ್ವಾಮಿ
Update: 2023-04-11 09:57 IST
ಬಳ್ಳಾರಿ: ''ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ರೇವಣ್ಣ ಅವರ ಮನವೊಲಿಸುವ ಶಕ್ತಿ ಎಚ್.ಡಿ.ದೇವೇಗೌಡರಿಗೂ ಇಲ್ಲ. ಅದೇ ನಮ್ಮ ದುರಾದೃಷ್ಟ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಗುಗ್ಗರಹಟ್ಟಿಯಲ್ಲಿ ಸೋಮವಾರ ಪಂಚರತ್ನ ಯಾತ್ರೆ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಟಿಕೆಟ್ ಬಗ್ಗೆ ರೇವಣ್ಣ ಅವರು ಈವರೆಗೂ ನನ್ನ ಬಳಿ ಚರ್ಚೆಗೆ ಬಂದಿಲ್ಲ. ನಮ್ಮ ಪಕ್ಷ ಹೊರತು ಪಡಿಸಿ, ಹಾಸನದಲ್ಲಿ ಕೆಲವು ಮನೆ ಹಾಳು ಮಾಡುವ ಶಕುನಿಗಳಿದ್ದಾರೆ. ಅವರು ಬೆಳಗ್ಗೆಯಿಂದ ಸಂಜೆಯವರೆಗೂ ರೇವಣ್ಣನವರ ಬ್ರೈನ್ ವಾಶ್ ಮಾಡುತ್ತಿದ್ದಾರೆ'' ಎಂದು ಕಿಡಿಕಾರಿದರು.
'ಹಾಸನ ಟಿಕೆಟ್ ಕಾರ್ಯಕರ್ತರಿಗೆ ಕೊಡಬೇಕು ಎಂಬುದು ನನ್ನ ನಿಲುವು. ಇದನ್ನು ನೂರು ಬಾರಿ ಅಲ್ಲ, ಸಾವಿರ ಬಾರಿ ಹೇಳುತ್ತೇನೆ' ಎಂದು ಸ್ಪಷ್ಟಪಡಿಸಿದರು.