ಕೆಪಿಸಿಸಿ ಕಾನೂನು ವಿಭಾಗದ ಉಸ್ತುವಾರಿಯಾಗಿ ಎಸ್.ಎ.ಅಹಮದ್ ನೇಮಕ
Update: 2023-04-11 16:05 IST
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ವಿಭಾಗದ ಉಸ್ತುವಾರಿಯಾಗಿ ಎಸ್.ಎ.ಅಹಮದ್ ಅವರನ್ನು ನೇಮಕ ಮಾಡಲಾಗಿದೆ.
ಕೆಪಿಸಿಸಿ ಕಾನೂನು ವಿಭಾಗದ ಹಾಲಿ ಅಧ್ಯಕ್ಷ ಎಸ್.ಎಸ್.ಪೊನ್ನಣ್ಣ ಅವರನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಹಾಲಿ ಕಾನೂನು ವಿಭಾಗದ ಉಪಾಧ್ಯಕ್ಷ ಎಸ್.ಎ.ಅಹಮದ್ ಅವರನ್ನು ಕಾನೂನು ವಿಭಾಗದ ಉಸ್ತುವಾರಿಯನ್ನಾಗಿ ನಿಯೋಜಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆದೇಶಿಸಿದ್ದಾರೆ.