×
Ad

ಮಳವಳ್ಳಿ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತ್ಯು, ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಗಾಯ

Update: 2023-04-11 21:03 IST

ಮಳವಳ್ಳಿ (ಮಂಡ್ಯ): ತಾಲೂಕಿನ ದಾಸನದೊಡ್ಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬುಲೇರೋ ಗೂಡ್ಸ್ ವಾಹನ ಹಾಗೂ ಕಾರೊಂದರ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ. 

ಕಾರಿನಲ್ಲಿದ್ದ ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ಮೊದಲಿಯಮ್ಮ(50), ಜಾಸ್ಮಿನ್ ಮೇರಿ (60) ಮೃತರು ಎಂದು ಗುರುತಿಸಲಾಗಿದೆ.

ಇದರಲ್ಲಿದ್ದ ಇನ್ನೂ ಮೂವರು ಸೇರಿದಂತೆ ಬುಲೆರೋ ವಾಹನದಲ್ಲಿದ್ದ ಮದ್ದೂರು ತಾಲೂಕಿನ ಕೆ.ಪಿ.ದೊಡ್ಡಿ ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಡ್ಡಿದ್ದಾರೆ ಎಂದು ತಿಳಿದು ಬಂದಿದೆ. 

ಕೆ.ಪಿ.ದೊಡ್ಡಿ ಗ್ರಾಮದಿಂದ ಶಿವನಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೇವರ ಕಾರ್ಯಮುಗಿಸಿಕೊಂಡು ಗೂಡ್ಸ್ ವಾಹನದಲ್ಲಿ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದು, ಮಳವಳ್ಳಿ ಕಡೆಯಿಂದ  ಸ್ಕಾರ್ಪಿಯೋ ಕಾರಿನಲ್ಲಿದ್ದವರು ಜಾಗೇರಿಗೆ ಗ್ರಾಮಕ್ಕೆ ತೆರಳುತ್ತಿದ್ದಾಗ ದಾಸನದೊಡ್ಡಿ ಬಳಿ ತನ್ನ ಮುಂದೆ ಚಲಿಸುತ್ತಿದ್ದ ವಾಹನವನ್ನು ಹಿಂದಿಕ್ಕಲು ಮುಂದಾದಾಗ ಎದುರಿನಿಂದ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News