ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸಚಿವ ವಿ ಸೋಮಣ್ಣ ಕಣಕ್ಕೆ
Update: 2023-04-11 21:54 IST
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣರನ್ನು ವರುಣಾದಲ್ಲಿ ಬಿಜೆಪಿ ಕಣಕ್ಕಿಳಿಸಿದೆ. ಲಿಂಗಾಯತ ಮತಗಳನ್ನು ಗಮನದಲ್ಲಿಟ್ಟು ಸೋಮಣ್ಣರನ್ನು ಕಣಕ್ಕಿಳಿಸಲಾಗಿದೆ.
ಪ್ರಬಲ ನಾಯಕರ ವಿರುದ್ಧ ಪ್ರಬಲ ನಾಯಕರನ್ನೇ ಕಣಕ್ಕಿಳಿಸಲು ಬಿಜೆಪಿ ಯೋಜಿಸಿಕೊಂಡಿದ್ದು, ಸೋಮಣ್ಣರನ್ನು ಚಾಮರಾಜನಗರದಿಂದಲೂ ಕಣಕ್ಕಿಳಿಸಲಾಗಿದೆ.