×
Ad

ಬಿಜೆಪಿ ಟಿಕೆಟ್: ಶಿವಮೊಗ್ಗ, ಗೋವಿಂದರಾಜನಗರ, ಮಹದೇವಪುರ ಮತ್ತು ಶೆಟ್ಟರ್ ಕ್ಷೇತ್ರಗಳಲ್ಲಿ ಮುಂದುವರಿದ ಕುತೂಹಲ

Update: 2023-04-11 22:20 IST

ಬೆಂಗಳೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಪಕ್ಷದ ಮೊದಲ ಪಟ್ಟಿ ಇಂದು ರಾತ್ರಿ ಬಿಡುಗಡೆಯಾಗಿದ್ದು ಶಿವಮೊಗ್ಗ ನಗರಕ್ಕೆ ಟಿಕೆಟ್ ಘೋಷಣೆ ಮಾಡಿಲ್ಲ. 

ಈಶ್ವರಪ್ಪ ನಿವೃತ್ತಿ ಘೋಷಿಸಿದ್ದು ಅವರು ಹಾಲಿ ಶಾಸಕರಾಗಿರುವ  ಕ್ಷೇತ್ರಕ್ಕೆ ಯಾರ ಹೆಸರನ್ನೂ ಘೋಷಿಸಿಲ್ಲ. ಈಶ್ವರಪ್ಪ ಪುತ್ರ ಕಾಂತೇಶ್ ಅಲ್ಲಿ ಟಿಕೆಟ್ ಗೆ ಪ್ರಬಲ ಆಕಾಂಕ್ಷಿ. 

ವರುಣಾದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸೋಮಣ್ಣ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ಅವರು ಹಾಲಿ ಶಾಸಕರಾಗಿರುವ ಬೆಂಗಳೂರಿನ ಗೋವಿಂದರಾಜ ನಗರಕ್ಕೆ ಟಿಕೆಟ್ ಘೋಷಿಸಿಲ್ಲ. ಅಲ್ಲಿ ಅವರ ಪುತ್ರ ಡಾ. ಅರುಣ್ ಸೋಮಣ್ಣ ಟಿಕೆಟ್ ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.  

ಅದೇ ರೀತಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಹಾಲಿ ಶಾಸಕರಾಗಿರುವ ಮಹದೇವಪುರ ಕ್ಷೇತ್ರಕ್ಕೂ ಟಿಕೆಟ್ ಘೋಷಣೆಯಾಗಿಲ್ಲ. ಅಲ್ಲಿಂದ ಲಿಂಬಾವಳಿ ಗೆ ಮತ್ತೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿತ್ತು. 

ನಿವೃತ್ತಿ ಘೋಷಿಸಿ ಎಂದು ವರಿಷ್ಟರು ಹೇಳಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೂ ಟಿಕೆಟ್ ಪ್ರಕಟಿಸಿಲ್ಲ.

Similar News