ಬಿಜೆಪಿ ಟಿಕೆಟ್: ಬೇಡ ಅಂದ್ರೂ ಎಂಟಿಬಿ ನಾಗರಾಜ್ ಗೆ ಟಿಕೆಟ್
ಎಚ್ ಡಿ ಕೆ ವಿರುದ್ಧ ಯೋಗೇಶ್ವರ್ ಕಣಕ್ಕೆ
Update: 2023-04-11 22:30 IST
ಬೆಂಗಳೂರು, ಎ.11: ಮೇ 10ರಂದು ನಡೆಯಲಿರುವ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಾತ್ರಿ ಬಿಡುಗಡೆಯಾಗಿದ್ದು ಇಬ್ಬರು ವಿಧಾನಪರಿಷತ್ ಸದಸ್ಯರಿಗೆ ಟಿಕೆಟ್ ನೀಡಿದೆ.
ಎಚ್ ಡಿ ಕುಮಾರಸ್ವಾಮಿ ಶಾಸಕರಾಗಿರುವ ಚನ್ನಪಟ್ಟಣದಲ್ಲಿ ಅವರೇ ಮತ್ತೆ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದು ಅವರ ವಿರುದ್ಧ ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ. ಹೊಸಕೋಟೆಯಿಂದ ಮತ್ತೆ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಘೋಷಿಸಿದೆ.
ಎಂಟಿಬಿ ನಾಗರಾಜ್ ತಾನು ಇನ್ನು ಸ್ಪರ್ಧಿಸುವುದಿಲ್ಲ, ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದರು. ಆದರೆ ಅವರಿಗೇ ಟಿಕೆಟ್ ನೀಡಲಾಗಿದೆ.